ಬಾನಂಗಳದಲ್ಲಿ ಫೋಟೋಶೂಟ್; ಲೋಹದ ಹಕ್ಕಿಗಳಿಂದ ಸಖತ್ ಪೋಸ್; ಫೋಟೋಗ್ರಾಫರ್‌ಗೆ ಶಹಬ್ಬಾಸ್!

Sep 26, 2020, 3:42 PM IST

ನವದೆಹಲಿ (ಸೆ. 26): ಫೋಟೋಗ್ರಫಿ ಎಂದರೆ ಅದು ಆ ಕ್ಷಣದ ಸತ್ಯ. ಯಾವ ಕಾಲಕ್ಕೂ ಉಳಿದು ಬಿಡುವ ಸತ್ಯ. ಕಳೆದು ಹೋದ ಕ್ಷಣಗಳ ನೆನಪನ್ನು ಯಾವಾಗ ಬೇಕಾದರೂ ಕಟ್ಟಿ ಕೊಡುವ ಮಾಯಾವಿ ಎಂದರೆ ತಪ್ಪಾಗಲಿಕ್ಕಿಲ್ಲ. ಇತ್ತೀಚಿನ ದಿನಗಳಲ್ಲಿ ಫೋಟೋಗ್ರಫಿ ಹಾಬಿಯಾಗಿ ಟ್ರೆಂಡಾಗಿದೆ. 

ಫೋಟೋಗ್ರಫಿಯಲ್ಲಿ ಹೊಸ ಹೊಸ ಪ್ರಯೋಗಗಳು, ಬೇರೆ ಬೇರೆ ರೀತಿಯ ಫೋಟೋಶೂಟ್‌ಗಳು ಇತ್ತೀಚಿಗೆ ಬಹಳಷ್ಟು ನಡೆಯುತ್ತಿದೆ. ಎಂಗೇಜ್‌ಮೆಂಟ್,  ಪ್ರೀ ವೆಡ್ಡಿಂಗ್ ಫೋಟೋಶೂಟ್, ವೆಡ್ಡಿಂಗ್ ಫೋಟೋಶೂಟ್‌. ಸೋಲೋ, ಫೋಟೋಶೂಟ್‌ನಲ್ಲೆಲ್ಲಾ ಹೊಸ ಹೊಸ ಪ್ರಯೋಗಗಳನ್ನು ನೋಡಿದ್ದೇವೆ. ಆದರೆ ಆಕಾಶದಲ್ಲಿ ಫೋಟೋಶೂಟ್ ನೋಡಿದ್ದೀರಾ? ಅರೇ, ಆಕಾಶದಲ್ಲಿಯೂ ಫೋಟೋಶೂಟಾ? ಇದೇನಿದು ಹೊಸದು? ಅಂತಿದ್ದೀರಾ? ಹೌದು. ಇದೊಂದು ಹೊಸ ಪ್ರಯೋಗ ನಡೆಯುತ್ತಿದೆ. 

ಸೌದಿ ಅರೇಬಿಯಾದಲ್ಲಿ 90 ನೇ ರಾಷ್ಟ್ರೀಯ ದಿನದ ಅಂಗವಾಗಿ ಏರ್‌ ಶೋ ನಡೆಯುತ್ತಿದೆ.  ಏರ್‌ಶೋ ತಾಲೀಮು ಸಂದರ್ಭದಲ್ಲಿ  ಖ್ಯಾತ ವೈಮಾನಿಕ ಫೋಟೋಗ್ರಾಫರ್ ಆಹಮದ್ ಹಾದರ್‌ ಅದ್ಭುತ ಪ್ರಯೋಗ ಮಾಡಿದ್ದಾರೆ. ಮಿಲಿಟರಿ ಸರಕು ವಿಮಾನದ ರ‍್ಯಾಂಪ್‌ನಲ್ಲಿ ನಿಂತು ಫೋಟೋ ಕ್ಲಿಕ್ಕಿಸಿದ್ದಾರೆ. ಫೋಟೋಗ್ರಾಫರ್ ತಾಳಕ್ಕೆ ತಕ್ಕಂತೆ ಕ್ಯಾಮೆರಾ ಮುಂದೆ ಹೇಗೆ ಲೋಹದಹಕ್ಕಿಗಳು ಪೋಸ್ ಕೊಡುತ್ತಿವೆ ನೋಡಿ!