Apr 5, 2022, 4:39 PM IST
ಬೆಂಗಳೂರು (ಏ.5): ದೇಶದಲ್ಲಿ ಒಂದು ಸ್ಥಿರ ಸರ್ಕಾರ, ಆರ್ಥಿಕ ಸ್ವಾವಲಂಬನೆ ಇಲ್ಲದೇ ಇದ್ದಲ್ಲಿ ಏನಾಗಬಹುದು ಎನ್ನುವುದಕ್ಕೆ ಶ್ರೀಲಂಕಾ ವಿಶ್ವದ ಎದುರಿಗೆ ನಿಂತ ಮತ್ತೊಂದು ಉದಾಹರಣೆ. ಆರ್ಥಿಕ ಸಂಕಷ್ಟದಿಂದಾಗಿ (Economic Crisis) ಇಂದು ಇಡೀ ದೇಶ ದಿವಾಳಿಯ ಅಂಚಿಗೆ ಬಂದು ತಲುಪಿದೆ. ಶ್ರೀಲಂಕಾದಲ್ಲಿ ದಿನನಿತ್ಯದ ವಸ್ತುಗಳಿಗೆ ಇರುವ ಬೆಲೆ ಕೇಳಿದರೆ, ಅಬ್ಬಾ ನಾನಿರುವ ದೇಶವೇ ಬೆಸ್ಟ್ ಅನ್ನೋ ಖುಷಿ ನಮ್ಮದಾಗುತ್ತೆ.
ಶ್ರೀಲಂಕಾದಲ್ಲಿ (Sri Lanka) ಒಂದು ಕೆಜಿ ಅಕ್ಕಿಗೆ 500 ರೂಪಾಯಿ, ಕೆಜಿ ಸಕ್ಕರೆಗೆ 290 ರೂಪಾಯಿ, 400 ಗ್ರಾಂ ಹಾಲಿಗೆ 79 ರೂಪಾಯಿ. ಒಂದೇ ಒಂದು ಬಾಂಬ್ ಬ್ಲಾಸ್ಟ್ ನಿಂದ ಇಡೀ ದೇಶ ಇಂದು ಬೀದಿಗೆ ಬಿದ್ದಿದೆ ಎಂದರೆ ಅಚ್ಚರಿಯಾಗದೇ ಇರದು. ಇದರೊಂದಿಗೆ ಶ್ರೀಲಂಕಾವನ್ನು ಆಳಿದ ಒಂದೇ ಕುಟುಂಬ ಹಾಗೂ ಅದರ ರಾಜಕೀಯಗಳು (Family Politics) ಇವೆಲ್ಲವೂ ದೇಶದ ದಿವಾಳಿಗೆ ಕಾರಣವಾಗಿ ಉಳಿದುಕೊಂಡಿದೆ.
Sri Lanka Economic Crisis ಅಧ್ಯಕ್ಷರ ಮನೆಯ ಮುಂದೆ ಹಿಂಸಾತ್ಮಕ ಪ್ರತಿಭಟನೆ, ದೇಶದಲ್ಲಿ ಡೀಸೆಲ್ ಖಾಲಿ!
ನೀರು, ಡೀಸೆಲ್, ಔಷಧ, ಎಕ್ಸಾ ಯಾವುದಕ್ಕೂ ಶ್ರೀಲಂಕಾ ಬಳಿ ಹಣವಿಲ್ಲ. ಇದಕ್ಕೆಲ್ಲ ಕಾರಣ ಒಂದು ಕುಟುಂಬದ ಎಡವಟ್ಟು. ಶ್ರೀಲಂಕಾದ ಜಿಡಿಪಿಗೆ (GDP) ಬಹುದೊಡ್ಡ ಕಾಣಿಕೆ ನೀಡುವುದು ಪ್ರವಾಸೋದ್ಯಮ (Tourism) ಆದರೆ, 2019ರಲ್ಲಿ ಸಂಭವಿಸಿದ ಈಸ್ಟರ್ ಬಾಂಬ್ ಸ್ಫೋಟದಿಂದಾಗಿ ಶ್ರೀಲಂಕಾಗೆ ಬರುವ ಪ್ರವಾಸಿಗರಲ್ಲಿ ದೊಡ್ಡ ಮಟ್ಟದ ಇಳಿಕೆಯಾಗಿದೆ. ಯುರೋಪಿಯನ್ ಪ್ರವಾಸಿಗರು ದಂಡಿಯಾಗಿ ಸುರಿಯುತ್ತಿದ್ದ ಹಣಕ್ಕೂ ಕಡಿವಾಣ ಬಿದ್ದಿದೆ.