Nov 20, 2023, 2:27 PM IST
ಕ್ಷಣ ಕ್ಷಣಕ್ಕೂ ರಕ್ತಬಿಜಾಸುರರ ಅಟ್ಟಹಾಸ ತಾರಕಕ್ಕೇರ್ತಿದೆ. 40 ದಿನಗಳಾದ್ರೂ ಮಿಸೈಲ್‌ಗಳ ದಾಳಿ(Missile attack) ಮಾತ್ರ ಗುಲಗಂಜಿಯಷ್ಟು ಕಮ್ಮಿಯಾಗ್ತಿಲ್ಲ. ಉಗ್ರರ ಬಂದೂಕಿನಿಂದ ಸಿಡಿದ ಗುಂಡು ಸಾವಿರ ಸಾವಿರ ಮಂದಿಯ ತಲೆ ಸೀಳುತ್ತಿದೆ. ಇಷ್ಟೆಲ್ಲಾ ಪಾಪಕೃತ್ಯ ಮಾಡಿರೋ ಹಮಾಸ್(Hamas) ಉಗ್ರರ ನಿರ್ನಾಮ ಮಾಡೋದ್ ಅಂದ್ರೆ ಚಿಟಗೆ ಹೊಡೆದಷ್ಟು ಸುಲಭ. ಆದ್ರೆ ಈ ಹಮಾಸ್ ಉಗ್ರರು ಮಕ್ಕಳ ಆಸ್ಪತ್ರೆ, ಶಾಲೆಗಳ ಅಂಡರ್ ಗ್ರೌಂಡ್‌ಗಳಲ್ಲಿ , ಸುರಂಗ ತೋಡಿ ಅವಿತು ಕುಳಿತಿದ್ದಾರೆ. ಇಲಿ ಹೆಗ್ಗಣಗಳಂತೆ ಪಾತಾಳ ಸೇರಿರೋ ವಿಷಜಂತುಗಳನ್ನ ಹೊಡೆದುರುಳಿಸುವ ಶಪಥ ಮಾಡಿದೆ ಇಸ್ರೇಲ್(Israel). ಆಕಾಶದಿಂದ ಬಾಂಬ್ , ಮಿಸೈಲ್‌ಗಳು ಭೂಮಿಯನ್ನ ನಡುಗಿಸಿ ಬಿಡುತ್ತಿದ್ವು, ಮಿಸೈಲ್ ಅಟ್ಯಾಕ್‌ಗೆ ಇಡಿ ನಗರಕ್ಕೆ ನಗರವೇ ಸರ್ವನಾಶವಾಗಿತ್ತು. ಬಹುಮಹಡಿ ಕಟ್ಟಡ ಕ್ಷಣಮಾತ್ರದಲ್ಲಿ ಧರಾಶಾಹಿಯಾಗಿತ್ತು. ಅಂದು ಶುರುವಾದ ಈ ಎಮರ್ಜೆನ್ಸಿ ಸೈರನ್ ಒಂದು ತಿಂಗಳಾದ್ರೂ ನಿಂತಿಲ್ಲ. ಗಾಜಾದಲ್ಲಿ ಕ್ಷಣಕ್ಷಣಕ್ಕೂ ಸಾವುಗಳ ಸಂಖ್ಯೆ ಏರುತ್ತಲೇ ಇದೆ. ಬೀದಿಬೀದಿಯೂ ರಕ್ತಸಿಕ್ತವಾಗ್ತಾ ಇದೆ. ಉಗ್ರರ ದಾಳಿಗೆ ಇಸ್ರೇಲ್ ನಡೆಸ್ತಾ ಇರೋ ಪ್ರತಿದಾಳಿಯಂತೂ ಗಾಜಾ ಪಟ್ಟಿಯ ಸರ್ವನಾಶ ಮಾಡೋಕೆ ಹೊರಟಂತಿದೆ.. ಆದ್ರೆ ನಿಜಕ್ಕೂ ಇಸ್ರೇಲಿಗರ ಟಾರ್ಗೆಟ್ ಆಗಿರೋದು ಹಮಾಸ್ ಉಗ್ರರು.
ಇದನ್ನೂ ವೀಕ್ಷಿಸಿ: ವರನ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಮಧುಮಗಳು: ಜಾತಿಯೇ ಐಶ್ವರ್ಯ ಸಾವಿಗೆ ಕಾರಣವಾಯ್ತಾ ?