Feb 26, 2022, 10:07 AM IST
ಇಡೀ ವಿಶ್ವದಲ್ಲಿ ಭಾರಿ ಆತಂಕ ಹುಟ್ಟುಹಾಕಿದ್ದ ರಷ್ಯಾ- ಉಕ್ರೇನ್ ನಡುವಿನ ಯುದ್ಧ ಶೀಘ್ರವೇ ಉಕ್ರೇನ್‌ನ ಶರಣಾಗತಿಯೊಂದಿಗೆ ಮುಕ್ತಾಯವಾಗುವ ಸೂಚನೆಗಳು ಕಂಡುಬಂದಿವೆ. ಉಕ್ರೇನ್‌ನ ವಾಯು, ಭೂ ಗಡಿ ಭೇದಿಸುವಲ್ಲಿ ಯಶಸ್ವಿಯಾಗಿದ್ದ ರಷ್ಯಾ ಸೇನಾ ಪಡೆಗಳು ರಾಜಧಾನಿ ಕೀವ್ ಸೇರಿದಂತೆ ಇನ್ನಷ್ಟುಪ್ರದೇಶಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿವೆ.
ಮತ್ತೊಂದೆಡೆ ನ್ಯಾಟೋ ಸೇರಿದಂತೆ ಯಾವುದೇ ದೇಶಗಳು ಕೂಡ ನೇರ ಸೇನಾ ನೆರವು ನೀಡದೆ ದೂರವೇ ಉಳಿದ ಕಾರಣ, ಏಕಾಂಗಿಯಾಗಿರುವ ಉಕ್ರೇನ್ ಶರಣಾಗತಿಯತ್ತ ಹೆಜ್ಜೆ ಹಾಕಿದೆ.
ಯಾವುದೇ ಸಮಯದಲ್ಲಿ ಎಲ್ಲಿಂದ ಬೇಕಾದರೂ ರಷ್ಯಾ ದಾಳಿ ನಡೆಸಬಹುದು ಎಂಬ ಆತಂಕದಲ್ಲಿರುವ ಉಕ್ರೇನಿಯರು ಮತ್ತು ದೇಶದ ನಾನಾ ಭಾಗಗಳಲ್ಲಿ ಇರುವ ಸಾವಿರಾರು ವಿದೇಶಿಯರು ತಮ್ಮ ಸಾಕು ಪ್ರಾಣಿಗಳೊಂದಿಗೆ ಇಂಥ ಬಂಕರ್‌ಗಳ ಮೊರೆ ಹೋಗಿದ್ದಾರೆ. ತಮ್ಮೊಂದಿಗೆ ಸಾಕು ಪ್ರಾಣಿಗಳನ್ನೂ ತಂದಿಟ್ಟುಕೊಂಡಿದ್ದಾರೆ. ಸಾಮಾನ್ಯ ಮನೆಗಳಿಗಿಂತ ಭಿನ್ನವಾಗಿರುವ, ಪುಟ್ಟಮತ್ತು ವಿಶಾಲವಾಗಿ ಇರುವ ಇಂಥ ಬಂಕರ್‌ಗಳಲ್ಲಿ ಮಲಗುವ, ಶೌಚಾಲಯದ ಸಾಮಾನ್ಯ ಸೌಕರ್ಯಗಳನ್ನು ಕಲ್ಪಿಸಲಾಗಿದೆ.