ರಷ್ಯಾ-ಉಕ್ರೇನ್ ನಡುವಿನ ಯುದ್ಧ 12 ನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್‌ನ ಏರ್‌ಪೋರ್ಟ್‌ಗಳೇ ರಷ್ಯಾ ಟಾರ್ಗೆಟ್ ಮಾಡುತ್ತಿದೆ. ವಿನ್ನಿಸಿಯಾ ನಗರದ ಏರ್‌ಪೋರ್ಟ್ ನಾಮಾವಶೇಷವಾಗಿದೆ. ಜನವಸತಿ ಕೇಂದ್ರಗಳ ಮೇಲೆ ರಷ್ಯಾ ದಾಳಿ ಮುಂದುವರೆಸಿದೆ.
ರಷ್ಯಾ-ಉಕ್ರೇನ್ ನಡುವಿನ ಯುದ್ಧ 12 ನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್‌ನ ಏರ್‌ಪೋರ್ಟ್‌ಗಳೇ ರಷ್ಯಾ ಟಾರ್ಗೆಟ್ ಮಾಡುತ್ತಿದೆ. ವಿನ್ನಿಸಿಯಾ ನಗರದ ಏರ್‌ಪೋರ್ಟ್ ನಾಮಾವಶೇಷವಾಗಿದೆ. ಜನವಸತಿ ಕೇಂದ್ರಗಳ ಮೇಲೆ ರಷ್ಯಾ ದಾಳಿ ಮುಂದುವರೆಸಿದೆ.
ಉಕ್ರೇನ್‌ಗೆ ನೇರವಾಗಿ ಎಚ್ಚರಿಕೆಯೊಂದನ್ನು ನೀಡಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ‘ಉಕ್ರೇನ್‌ನ ರಾಜ್ಯತ್ವ (ಸ್ಟೇಟ್‌ಹುಡ್) ಅಪಾಯದಲ್ಲಿದೆ. ಇದಕ್ಕೆ ಅವರೇ ಹೊಣೆ’ ಎಂದು ಹೇಳಿದ್ದಾರೆ. ‘ಉಕ್ರೇನ್‌ನವರು ಈಗೇನು ಮಾಡುತ್ತಿದ್ದಾರೋ ಅದನ್ನೇ ಮಾಡುತ್ತಿದ್ದರೆ ಅವರು ಉಳಿಯುವುದು ಅನುಮಾನವಿದೆ. ಹಾಗೇನಾದರೂ ಆದರೆ ಅದಕ್ಕೂ ಅವರೇ ನೇರ ಹೊಣೆ’ ಎನ್ನುವ ಮೂಲಕ ಉಕ್ರೇನ್ ದೇಶ ಉಳಿಯುವುದು ಅನುಮಾನ ಎಂಬರ್ಥದಲ್ಲಿ ಬೆದರಿಕೆಯೊಡ್ಡಿದ್ದಾರೆ.