ಉಕ್ರೇನ್ ಮೇಲಿನ ಯುದ್ಧದಿಂದ ಪುಟಿನ್ ಆರೋಗ್ಯದ ಮೇಲೆ ಪರಿಣಾಮ
ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ ವ್ಲಾಡಿಮಿರ್ ಪುಟಿನ್
ಗುಪ್ತಚರ ಮೂಲಗಳ ಉಲ್ಲೇಖಿಸಿ ಮಾಧ್ಯಮಗಳ ವರದಿ
ಬೆಂಗಳೂರು (ಮಾ. 22): ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russian President Vladimir Putin ) ಅವರು ಬುದ್ಧಿಮಾಂದ್ಯತೆ, ಪಾರ್ಕಿನ್ಸನ್ ಕಾಯಿಲೆ ಅಥವಾ ಕ್ಯಾನ್ಸರ್‌ಗೆ ಸ್ಟೀರಾಯ್ಡ್ ಚಿಕಿತ್ಸೆಯ `ರಾಯ್ಡ್ ರೇಜ್' ನಿಂದ ಉಂಟಾಗುವ ಮೆದುಳಿನ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ಗುಪ್ತಚರ ಮೂಲಗಳನ್ನು (intelligence sources) ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಉಕ್ರೇನ್ (Ukraine) ಮೇಲಿನ ಯುದ್ಧ ಪುಟಿನ್ ಅವರ ಈ ಕಾಯಿಲೆಯ ಮೇಲೆ ಇನ್ನಷ್ಟು ಪರಿಣಾಮ ಬೀರಿರಬಹುದು ಎಂದು ಅಂದಾಜಿಸಲಾಗಿದೆ.
ಕ್ರೆಮ್ಲಿನ್ ಸಮೀಪದ ಮೂಲಗಳನ್ನು ಉಲ್ಲೇಖಿಸಿ, ಆಸ್ಟ್ರೇಲಿಯಾ, ಕೆನಡಾ, ನ್ಯೂಜಿಲೆಂಡ್, ಯುಕೆ ಮತ್ತು ಯುಎಸ್ ಅನ್ನು ಒಳಗೊಂಡಿರುವ ಐದು ದೇಶಗಳ ಗುಪ್ತಚರ ಒಕ್ಕೂಟದ ಹಿರಿಯ ವ್ಯಕ್ತಿಗಳು, ಉಕ್ರೇನ್ ಮೇಲೆ ಆಕ್ರಮಣ ಮಾಡುವ ರಷ್ಯಾದ ಅಧ್ಯಕ್ಷರ ನಿರ್ಧಾರಕ್ಕೆ ಅವರ ಮೆದುಳಿನ ಸಮಸ್ಯೆಯೂ ಕಾರಣವಾಗಿರಬಹುದು ಎಂದು ಅಂದಾಜು ಮಾಡಲಾಗಿದೆ. ಒಂದೆಡೆ ಉಕ್ರೇನ್ ಶೌರ್ಯ ತೋರುತ್ತಿದ್ದರೆ, ರಷ್ಯಾ ಅಧ್ಯಕ್ಷ ಪುಟಿನ್ ಮಾತ್ರ ಮಹಾ ಮೌನಿಯಾಗಿದ್ದಾರೆ.
ತಣ್ಣಗಾದ್ರಾ ಝೆಲೆನ್ಸ್ಕಿ: ಇನ್ನಾದರೂ ಉಕ್ರೇನ್-ರಷ್ಯಾ ಯುದ್ಧ ನಿಲ್ಲುತ್ತಾ?
ಸತತ 25 ದಿನಗಳಿಂದ ರಷ್ಯಾ ಸೇನೆಗೆ ತಕ್ಕ ಉತ್ತರವನ್ನು ಉಕ್ರೇನ್ ನೀಡುತ್ತಾ ಬಂದಿದೆ. ಈ ನಡುವೆ ರಷ್ಯಾ ಅಧ್ಯಕ್ಷ ಪುಟಿನ್, ದೇಶದ ಸೇನಾ ಅಧ್ಯಕ್ಷರ ಮೇಲೆ ವಿಪರೀತ ಸಿಟ್ಟು ತೋರಿಸಿಕೊಳ್ತಿದ್ದಾರೆ. ಇದರ ನಡುವೆ ಗುಪ್ತಚರ ಇಲಾಖೆಯ ವರದಿಯ ಅನುಸಾರ ಪುಟಿನ್ ಆರೋಗ್ಯ ಸಮಸ್ಯೆ ಎದುರಿಸುತ್ತಿರೋದು ಖಚಿತ ಎಂದು ಹೇಳಲಾಗುತ್ತದೆ. ಈ ನಡುವೆ ಇಡೀ ಜಗತ್ತು ಉಕ್ರೇನ್ ಗೆ ಬೆಂಬಲ ನೀಡುತ್ತಿರುವುದು ಪುಟಿನ್ ಆತಂಕಕ್ಕೆ ಕಾರಣವಾಗಿದೆ.