Mar 6, 2022, 12:31 PM IST
ಬೆಂಗಳೂರು(ಮಾ.06): ರಷ್ಯಾ- ಉಕ್ರೇನ್ ಯುದ್ಧ 11ನೇ ದಿನವೂ ಮುಂದುವರೆದಿದೆ. ಉಕ್ರೇನ್‌ನ ಉತ್ತರ ಮತ್ತು ದಕ್ಷಿಣ ಎರಡೂ ಕಡೆಗಳಲ್ಲೂ ರಷ್ಯಾ ಸೇನೆ ದಾಳಿ ಮಾಡಿದೆ. ಉಕ್ರೇನ್‌ನ ಎರಡನೇ ಅತಿ ದೊಡ್ಡ ಅಣುಸ್ಥಾವರಕ್ಕೆ ರಷ್ಯಾ ಟಾರ್ಗೆಟ್ ಮಾಡಿ ಅಟ್ಯಾಕ್ ಮಾಡಿದೆ. ರಷ್ಯಾದ ಪ್ರಬಲ ದಾಳಿಗೆ ಉಕ್ರೇನ್ ಕೂಡ ಪ್ರತಿದಾಳಿ ನಡೆಸಿದೆ. ರಷ್ಯಾದ ಯುದ್ಧ ವಿಮಾನವನ್ನ ಉಕ್ರೇನ್ ಹೊಡೆದುರುಳಿಸಿದೆ. ಹೀಗಾಗಿ ಪ್ರತಿಷ್ಠೆಗೆ ಬಿದ್ದ ಪುಟಿನ್ ಪಡೆ ದಾಳಿಯನ್ನ ಮತ್ತಷ್ಟು ತೀವ್ರಗೊಳಿಸಿದೆ. ದಿನೇ ದಿನೇ ಯುದ್ಧ ಭೀಕರತೆಯನ್ನ ಪಡೆದುಕೊಳ್ಳುತ್ತಿದೆ. ಯುದ್ಧದಿಂದ ಈಗಾಲೇ ಸಾಕಷ್ಟು ಸಾವು, ನೋವುಗಳಾಗಿವೆ.
'ನಾನು ಮತ್ತೆ ಉಕ್ರೇನ್‌ಗೆ ಹೋಗಲ್ಲ, ಭಾರತದಲ್ಲೇ ಮೆಡಿಕಲ್ ಓದಲು ಅವಕಾಶ ಕೊಡಿ' ವಿದ್ಯಾರ್ಥಿಯ ಮನವಿ