News Hour: ಅಧ್ಯಕ್ಷ ರಾಜಪಕ್ಸ ಪರಾರಿ, ಪ್ರಧಾನಿ ವಿಕ್ರಮ್ ಸಿಂಘೆ ರಾಜೀನಾಮೆ: ಶ್ರೀಲಂಕಾ ಸ್ಥಿತಿ ಅಧ್ವಾನ!

News Hour: ಅಧ್ಯಕ್ಷ ರಾಜಪಕ್ಸ ಪರಾರಿ, ಪ್ರಧಾನಿ ವಿಕ್ರಮ್ ಸಿಂಘೆ ರಾಜೀನಾಮೆ: ಶ್ರೀಲಂಕಾ ಸ್ಥಿತಿ ಅಧ್ವಾನ!

Published : Jul 10, 2022, 12:19 AM IST

Sri Lanka Crisis Explained in Kannada: ಪುರಾಣದಲ್ಲಿ ಸ್ವರ್ಣ ಲಂಕಾ ಎಂದು ಖ್ಯಾತಿ ಪಡೆದಿದ್ದ ಶ್ರೀಲಂಕಾ ಇಂದು ಅಕ್ಷರಶಃ ನಿರ್ಗತಿಕವಾಗಿದೆ. ಲಂಕಾದಲ್ಲಿ ಗತವೈಭವ ಮರಳಿ ಪಡೆಯಲು ಲಂಕನ್ನರು ಸಹಾಯ ಹಸ್ತ ಬೇಡುತ್ತಿದ್ದಾರೆ 

ಕೊಲಂಬೋ (ಜು. 10):  ಪುರಾಣದಲ್ಲಿ ಸ್ವರ್ಣ ಲಂಕಾ ಎಂದು ಖ್ಯಾತಿ ಪಡೆದಿದ್ದ ಶ್ರೀಲಂಕಾ ಇಂದು ಅಕ್ಷರಶಃ ನಿರ್ಗತಿಕವಾಗಿದೆ. ಲಂಕಾದಲ್ಲಿ ಗತವೈಭವ ಮರಳಿ ಪಡೆಯಲು ಲಂಕನ್ನರು ಸಹಾಯ ಹಸ್ತ ಬೇಡುತ್ತಿದ್ದಾರೆ. ಪ್ರವಾಸಿಗರ ಸ್ವರ್ಗವಾಗಿದ್ದ ಲಂಕಾ ಈಗ ಬೀದಿಗೆ ಬಿದ್ದಿದೆ. ಆರ್ಥಿಕ ಸಂಕಷ್ಟಕ್ಕೆ ಬೇಸತ್ತ ಶ್ರೀಲಂಕಾ ಜನರ ಆಕ್ರೋಶದ ಕಟ್ಟೆ ಒಡೆದಿದೆ. ಬೆಲೆ ಏರಿಕೆ ಮಧ್ಯೆ ಅನ್ನ-ನೀರಿಗಾಗಿ ಹೋರಾಡುತ್ತಿದ್ದ ಲಂಕಾ ಜನರು ರೌದ್ರಾವತಾರ ತಾಳಿದ್ದಾರೆ. ತಾಳ್ಮೆ ಕಳೆದುಕೊಂಡ ಜನರು, ಅಧ್ಯಕ್ಷರ ಬಂಗಲೆಗೆ ನುಗ್ಗಿ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.  

ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ರಾಜೀನಾಮೆಗೆ ಒತ್ತಾಯಿಸಿ ಕೊಲೊಂಬೊದಲ್ಲಿ ರ‍್ಯಾಲಿ ನಡೆದಿದೆ. ಸಾಗರದಂತೆ ಬಂದ ಜನರು ಅಧ್ಯಕ್ಷರ ಸರ್ಕಾರಿ ಬಂಗಲೆಗೆ ಲಗ್ಗೆ ಇಟ್ಟಿದ್ದಾರೆ. ಜನರನ್ನು ಕಂಡ ರಾಜಪಕ್ಸೆ ಬಂಗಲೆಯಿಂದ  ಪಲಾಯನ ಮಾಡಿದ್ದಾರೆ. ಉದ್ವಿಗ್ನರ ರೋಷಾಗ್ನಿ ಕಿಚ್ಚಿಗೆ ಲಂಕಾ ರಾಜಧಾನಿ ಮೂಕ ಸಾಕ್ಷಿಯಾಗಿದೆ. ಅಧ್ಯಕ್ಷ ಗೊಟಬಾಯ ರಾಜೀನಾಮೆಗೆ ನಿರಂತರ ಒತ್ತಡದ ನಡುವೆಯೇ ಪ್ರಧಾನಿ ರನಿಲ್ ವಿಕ್ರಮಸಿಂಘೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ದ್ವೀಪ ರಾಷ್ಟ್ರದಲ್ಲಿ ರಾಜಕೀಯ ಗದ್ದಲದ ನಡುವೆಯೇ ಸರ್ವಪಕ್ಷ ಸರ್ಕಾರ ರಚನೆಗೆ ಈಗ ಹಾದಿ ಸುಗಮವಾಗಿದೆ.

ಇದನ್ನೂ ನೋಡಿ: ದ್ವೀಪ ರಾಷ್ಟ್ರದಲ್ಲಿ ಅರಾಜಕತೆಯ ತುತ್ತ ತುದಿಗೆ: ಅಧ್ಯಕ್ಷ ಗೊಟಬಾಯ ರಾಜಪಕ್ಸೆ ಪರಾರಿ!

46:44ಅಮೆರಿಕ VS ನ್ಯಾಟೋ ಸೈನಿಕರ ನಡುವೆ ‘ಗ್ರೀನ್‌ಲ್ಯಾಂಡ್’ ವಾರ್; ‘ಗ್ರೀನ್‌ಲ್ಯಾಂಡ್’ ವಶಕ್ಕೆ ಪಡೆಯಲು ಮುಂದಾದ ಅಧ್ಯಕ್ಷ ಟ್ರಂಪ್
48:16Left Right & Centre: ಟ್ರಂಪ್ ಆಡಳಿತಾವಧಿಯಲ್ಲಿ ಹೆಚ್ಚಾಯ್ತಾ ಅಮೆರಿಕಾ ದಾದಾಗಿರಿ?
19:15ಇರಾನ್ ಮೇಲೆ ಟ್ರಂಪ್ ಕೆಂಗಣ್ಣು; 3ನೇ ಮಹಾಯುದ್ದವಾದ್ರೆ ಭಾರತದ ಮೇಲಾಗುವ ಪರಿಣಾಮವೇನು?
44:40ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ಮೇಲೆ ಶೇ.500ರಷ್ಟು ಸುಂಕ?
20:21ಡೊನಾಲ್ಡ್ ಟ್ರಂಪ್ ಬಿಗ್ ಚೆಕ್! ಜಗತ್ತಿನ ಈ ಐದು ರಾಷ್ಟ್ರಗಳು ಈಗ ಅಮೆರಿಕಾದ ಟಾರ್ಗೆಟ್!
18:03Suvarna Focus: ಜಗತ್ತಿನ ವಿನಾಶಕ್ಕೆ ಮುನ್ನುಡಿ ಬರೆಯುತ್ತಾ ಅಮೆರಿಕದ ಸಾಹಸ?
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
22:39ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?
20:42ಎಪ್‌ಸ್ಟೀನ್ ಪಟ್ಟಿಯಲ್ಲಿ ಭಾರತದ ಘಟಾನುಘಟಿಗಳು: ಕಾಮುಕನ ಸೀಕ್ರೆಟ್ ಫೈಲ್ಸ್ ಸತ್ಯ ಹೊರಬರುತ್ತಾ? ಸಮಾಧಿಯಾಗುತ್ತಾ?
98:27ಆಸ್ಟ್ರೇಲಿಯಾ-ಇಂಡಿಯಾ ಲೀಡರ್‌ಶಿಪ್‌ ಅವಾರ್ಡ್ಸ್ 2025: 9 ತೆರೆಮರೆಯ ಸಾಧಕರಿಗೆ ಮೆಲ್ಬರ್ನ್‌ನಲ್ಲಿ ಸನ್ಮಾನ
Read more