ಹಜ್ ಯಾತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಬಲಿ: ಬಿಸಿಗಾಳಿ ದುರಂತಕ್ಕೆ ಕಾರಣವೇನು?

Jun 21, 2024, 9:45 AM IST

ಮೆಕ್ಕಾದಲ್ಲಿ ರಣಭೀಕರ ಬಿಸಿಲಿಗೆ 1000ಕ್ಕೂ ಜನ ಬಲಿಯಾಗಿದ್ದು, ತಾಪಮಾನ 52 ಡಿಗ್ರಿಗೆ ತಲುಪಿದೆ. ಹೀಗಾಗಿ ಹಜ್ ಯಾತ್ರೆಯಲ್ಲಿದ್ದ(Hajj Pilgrimage) 1000ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಮೆಕ್ಕಾದ(Mecca) ರಸ್ತೆಯಲ್ಲೇ ಹೆಣದ ರಾಶಿಗಳು ಬಿದ್ದಿವೆ. ಮೆಕ್ಕಾದಲ್ಲಿ ಹೆಣಗಳನ್ನ ಸಾಗಿಸಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 3 ಸಾವಿರಕ್ಕೂ ಹೆಚ್ಚು ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಕಳೆದ ವರ್ಷ ಬಿಸಿಗಾಳಿಗೆ 250ಕ್ಕೂ ಹೆಚ್ಚು ಯಾತ್ರಿಕರ ಸಾವಿಗೀಡಾಗಿದ್ದರು. ಮೆಕ್ಕಾದ ಹಜ್ ಯಾತ್ರೆಯಲ್ಲಿ ರಾಜ್ಯದ ಇಬ್ಬರು ಕೂಡ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಕೌಸರ್ ರುಕ್ಸಾನ, ಮೊಹಮ್ಮದ್ ಇಲಿಯಾಸ್ ಸಾವಿಗೀಡಾದ ವ್ಯಕ್ತಿಗಳಾಗಿದ್ದಾರೆ. ಬೆಂಗಳೂರಿನ ಆರ್.ಟಿ ನಗರದ ನಿವಾಸಿಗಳು ಹಜ್ ಯಾತ್ರೆ ಕೈಗೊಂಡಿದ್ದರು.

ಇದನ್ನೂ ವೀಕ್ಷಿಸಿ:  ಜರ್ನಲಿಸ್ಟ್ ಕೊಲೆ..ತಮಿಳು ಸೂಪರ್ ಸ್ಟಾರ್ ಸೆರೆವಾಸ ! ಅಪರಾಧ ಲೋಕದಲ್ಲೂ ಸ್ಟಾರ್‌ಗಳದ್ದೇ ದರ್ಬಾರ್ !