Operation Ganga: ಕೊನೆಯ ಹಂತದಲ್ಲಿ, ಇಂದು 8 ವಿಮಾನದಲ್ಲಿ 1500 ಮಂದಿ ತವರಿಗೆ

Operation Ganga: ಕೊನೆಯ ಹಂತದಲ್ಲಿ, ಇಂದು 8 ವಿಮಾನದಲ್ಲಿ 1500 ಮಂದಿ ತವರಿಗೆ

Published : Mar 07, 2022, 11:38 AM IST

ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ್ದ 16000 ಕ್ಕೂ ಹೆಚ್ಚು ಭಾರತೀಯರನ್ನು ರಕ್ಷಿಸುವ ‘ಆಪರೇಷನ್‌ ಗಂಗಾ’ ಬೃಹತ್‌ ಏರ್‌ಲಿಫ್ಟ್‌ ಕಾರ್ಯಾಚರಣೆ ಬಹುತೇಕ ಅಂತಿಮ ಹಂತಕ್ಕೆ ತಲುಪಿದೆ.

ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ್ದ 16000 ಕ್ಕೂ ಹೆಚ್ಚು ಭಾರತೀಯರನ್ನು ರಕ್ಷಿಸುವ ‘ಆಪರೇಷನ್‌ ಗಂಗಾ’ ಬೃಹತ್‌ ಏರ್‌ಲಿಫ್ಟ್‌ ಕಾರ್ಯಾಚರಣೆ ಬಹುತೇಕ ಅಂತಿಮ ಹಂತಕ್ಕೆ ತಲುಪಿದೆ. ಉಕ್ರೇನ್‌ನ ಅಕ್ಕಪಕ್ಕದ ದೇಶಗಳಾದ ರೊಮೇನಿಯಾ, ಹಂಗೇರಿ, ಸ್ಲೋವಾಕಿಯಾ ಹಾಗೂ ಪೋಲೆಂಡ್‌ನಿಂದ 2135 ಭಾರತೀಯರು ಭಾನುವಾರ 11 ವಿಮಾನಗಳಲ್ಲಿ ತವರಿಗೆ ಆಗಮಿಸಿದ್ದು, ಇಂದು 8 ವಿಮಾನಗಳಲ್ಲಿ ಇನ್ನೂ 1500 ಜನರು ತಾಯ್ನಾಡಿಗೆ ವಾಪಸಾಗಲಿದ್ದಾರೆ. ಅಲ್ಲಿಗೆ ಕಳೆದೊಂದು ವಾರದಲ್ಲಿ 82 ವಿಮಾನಗಳಲ್ಲಿ 16500ಕ್ಕೂ ಹೆಚ್ಚು ಜನರನ್ನು ತವರಿಗೆ ಕರೆತಂದಂತೆ ಆಗಲಿದೆ.

ಭಾರತೀಯ ವಾಯುಪಡೆ ಕೂಡ ಈವರೆಗೆ 10 ವಿಮಾನಗಳಲ್ಲಿ 2056 ಭಾರತೀಯರನ್ನು ಉಕ್ರೇನ್‌ನ ಅಕ್ಕಪಕ್ಕದ ದೇಶಗಳಿಂದ ಕರೆತಂದಿದೆ. ಜೊತೆಗೆ 26 ಟನ್‌ ನೆರವಿನ ಸಾಮಗ್ರಿಗಳನ್ನು ಉಕ್ರೇನ್‌ಗೆ ತಲುಪಿಸಿದೆ. ಇನ್ನುಳಿದಂತೆ ಇಂಡಿಗೋ, ಏರ್‌ ಇಂಡಿಯಾ, ವಿಸ್ತಾರ ಹಾಗೂ ಸ್ಪೈಸ್‌ಜೆಟ್‌ ವಿಮಾನಯಾನ ಕಂಪನಿಗಳು ಆಪರೇಷನ್‌ ಗಂಗಾ ಅಡಿ ಭಾರತ ಸರ್ಕಾರದ ಜೊತೆ ಕೈಜೋಡಿಸಿ ನಾಗರಿಕರನ್ನು ಕರೆತರುತ್ತಿವೆ.

26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
21:11ಇರಾನ್ ಬತ್ತಳಿಕೆಯಲ್ಲಿ ಮತ್ತೊಂದು ಮಹಾ ಬ್ರಹ್ಮಾಸ್ತ್ರ: ಅಮೆರಿಕ‌ ಮಾತ್ರವಲ್ಲ.. ಜಗತ್ತನ್ನೇ ಸೋಲಿಸುವ ಜಲಾಸ್ತ್ರ!
20:37ಬೆಂಕಿ ಹಚ್ಚಿದವರೇ.. ಆರಿಸೋಕೆ ಬರ್ತಾರೆ.. ಅಮೆರಿಕದ ಅಸಲಿ ಮುಖ! ಯುದ್ಧ ಬೂದಿಯಲ್ಲಿ ಚಿನ್ನ ಹುಡುಕುವ ತಂತ್ರ
22:5750 ದಿನಗಳಾದರೂ ನಡೆದಿಲ್ಲ ಅಲಿ ಖಮೇನಿ ಅಂತ್ಯಸಂಸ್ಕಾರ: ಶೋಕಾಚರಣೆ ಮುಗಿದರೂ ದಫನ್ ಮಾಡಿಲ್ಲ‌ವೇಕೆ?
26:11ಸೋಲದ ಸಿಂಹ ಇರಾನ್, ದಿಕ್ಕು ತಪ್ಪಿದ ದೊಡ್ಡಣ್ಣನ ಸೈನ್ಯ; ರಕ್ತಸಿಕ್ತ ಇತಿಹಾಸದ ಪುಟಗಳಲ್ಲಿದೆ ಅಮೆರಿಕದ ಘೋರ ವೈಫಲ್ಯ
46:03ಅಮೆರಿಕ ಅತ್ಯಾಧುನಿಕ ಯುದ್ಧ ವಿಮಾನಗಳೇ ಉಡೀಸ್; ಇರಾನ್ ಹೊಡೆತಕ್ಕೆ ಪತರಗುಟ್ಟಿದ ವಿಶ್ವದ ದೊಡ್ಡಣ್ಣ
Read more