Dec 17, 2020, 5:43 PM IST
ಬೆಂಗಳೂರು (ಡಿ. 17): ಕಳೆದೊಂದು ವರ್ಷದಿಂದ ವಿಶ್ವವನ್ನೇ ನಡುಗಿಸಿರುವ ಕೊರೋನಾ ವೈರಸ್ ಹುಟ್ಟಡಗಿಸಲು ಕಳೆದ ವಾರದಿಂದ ಲಸಿಕೆ ವಿತರಣೆ ಆರಂಭಿಸಿರುವ ಬ್ರಿಟನ್‌ನಲ್ಲಿ ಮಾರಕ ವೈರಾಣುವಿನ ಹೊಸ ಮಾದರಿಯೊಂದು ಪತ್ತೆಯಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಸಿಎಂ- ಮಾಜಿ ಸಿಎಂ ದಿನೇ ದಿನೇ ಹತ್ತಿರ; ಬೇರೆಯದೇ ಸುಳಿವು ನೀಡುತ್ತಿದೆ ರಾಜಕೀಯ ಸಮಿಕರಣ
ವೈರಸ್‌ನ ಹೊಸ ರೂಪಾಂತರದಿಂದಾಗಿ ಒಂದು ವಾರದಿಂದ ಬ್ರಿಟನ್‌ನಲ್ಲಿ ಸೋಂಕು ವೇಗವಾಗಿ ಹಬ್ಬುತ್ತಿದೆ. ಕೆಲವು ಪ್ರದೇಶಗಳಲ್ಲಿ ಸೋಂಕು ದ್ವಿಗುಣಗೊಳ್ಳುವ ಅವಧಿ 7 ದಿನಗಳಿಗೆ ಇಳಿದಿದೆ. ಈ ಹಿನ್ನೆಲೆಯಲ್ಲಿ ಬ್ರಿಟನ್ ಸರ್ಕಾರ ಹೈ ಅಲರ್ಟ್ ಘೋಷಣೆ ಮಾಡಿದೆ.ಇಂಗ್ಲೆಂಡ್‌ನ ಕೆಲವು ಭಾಗಗಳಲ್ಲಿ ಕೊರೋನಾ ವೈರಸ್‌ನ ಹೊಸ ಮಾದರಿ ಪತ್ತೆಯಾಗಿದ್ದು, ವೇಗವಾಗಿ ಹಬ್ಬುತ್ತಿದೆ. 1000 ಮಂದಿಯಲ್ಲಿ ಹೊಸ ಬಗೆಯ ಕೊರೋನಾ ಕಂಡುಬಂದಿದೆ. ಇದನ್ನು 60 ವಿವಿಧ ಸ್ಥಳೀಯ ಸಂಸ್ಥೆಗಳು ವರದಿ ಮಾಡಿವೆ.