Sep 4, 2020, 2:10 PM IST
ವಾಷಿಂಗ್‌ಟನ್ (ಸೆ. 04): ಅಮೇರಿಕಾದಲ್ಲಿ 'ನಾನಾ' ಎಂಬ ಚಂಡಮಾರುತ ಎದ್ದಿದ್ದು, ಗಂಟೆಗೆ 150 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಗಾಳಿ ಜೊತೆ ಭೀಕರ ಮಳೆಯೂ ಸುರಿಯುತ್ತಿದೆ. ಇದರಿಂದ ಅಮೆರಿಕಾ ತತ್ತರಿಸಿ ಹೋಗಿದೆ. ಚಂಡಮಾರುತದಿಂದ ಅಬ್ಬರಕ್ಕೆ ಕಟ್ಟಡ ಕುಸಿದಿದೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ. ಜನರು ತತ್ತರಿಸಿ ಹೋಗಿದ್ದಾರೆ. ಸಾಕಪ್ಪಾ ಸಹವಾಸ ಎನ್ನುತ್ತಿದ್ದಾರೆ. ಈ ವರ್ಷ ಬೇರೆ ಯಾವ ಚಂಡಮಾರುತವೂ ಈ ಪರಿ ಪೆಟ್ಟು ಕೊಟ್ಟಿರಲಿಲ್ಲ. ಆದರೆ ನಾನಾ ಚಂಡಮಾರುತ ಮಾತ್ರ ಭಾರೀ ಪೆಟ್ಟು ಕೊಟ್ಟಿದೆ.
ಒಂದು ಕಡೆ 'ನಾನಾ' ಚಂಡಮಾರುತ ಕರಾವಳಿ ಭಾಗದಲ್ಲಿ ದಾಳಿ ನಡೆಸುತ್ತಿದ್ದರೆ ಇನ್ನೊಂದು ಕಡೆ 'ಓಮರ್' ಎನ್ನುವ ಚಂಡಮಾರುತ ಅಮೆರಿಕಾದ ಮಧ್ಯಭಾಗದಲ್ಲಿ ಅಬ್ಬರಿಸುತ್ತಿದೆ. ಇದನ್ನ ನಾವು ಹೇಳೋದಕ್ಕಿಂತ ದೃಶ್ಯದಲ್ಲಿ ನೋಡಿದರೆ ನಿಮಗೆ ಅರ್ಥವಾಗುತ್ತದೆ. ನೋಡಿ..!
ಅಮೆರಿಕಾ - ಚೀನಾ ನಡುವಿನ ರಾಜತಾಂತ್ರಿಕ ಸಮರ ತಾರಕಕ್ಕೆ; ಸುಳಿವು ನೀಡಿದ ಟ್ರಂಪ್