Nov 9, 2020, 1:38 PM IST
ನವದೆಹಲಿ (ನ. 09): ಕುತೂಹಲ ಕೆರಳಿಸಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ಗೆಲುವು ಬಹುತೇಕ ನಿಚ್ಚಳವಾಗುತ್ತಿದೆ. ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ- ಚೀನಾ, ಭಾರತ-ಪಾಕಿಸ್ತಾನ ಗಡಿ ಬಿಕ್ಕಟ್ಟು ಸೇರಿದಂತೆ ಅನೇಕ ವಿಷಯಗಳಲ್ಲಿ ನೇರವಾಗಿ ಭಾರತ ಜೊತೆ ನಿಂತಿದ್ದರು. ಆದರೆ ಸದ್ಯ ಅಧ್ಯಕ್ಷ ಪಟ್ಟಟ್ರಂಪ್ ಅವರಿಂದ ಬೈಡೆನ್ ಅವರಿಗೆ ವರ್ಗಾವಣೆಯಾಗುವ ಹಂತದಲ್ಲಿದೆ. ಈ ಹಿನ್ನೆಲೆಯಲ್ಲಿ ಬೈಡೆನ್
ಅಧ್ಯಕ್ಷರಾಗುವುದರಿಂದ ಭಾರತಕ್ಕಾಗುವ ಲಾಭ-ನಷ್ಟಏನು ಎಂಬ ಸಂಕ್ಷಿಪ್ತ ವಿವರ ಇಲ್ಲಿದೆ.