Feb 26, 2022, 1:56 PM IST
ಯುದ್ಧ ಪೀಡಿತ ಉಕ್ರೇನ್‌ನಲ್ಲಿ, ಯಾವಾಗ ಬಾಂಬ್ ಬೀಳುತ್ತೋ, ಏನಾಗಲಿದೆಯೋ ಎಂಬ ಭಯದಲ್ಲೇ ಜನರು ಕಳೆಯುತ್ತಿದ್ದಾರೆ. ಕ್ಷಣ ಕ್ಷಣಕ್ಕೂ ಭೀಕರತೆ ಹೆಚ್ಚುತ್ತಿದೆ. ಬಂಕರ್‌ಗಳಲ್ಲಿ ಜನರು ರಕ್ಷಣೆ ಪಡೆಯುತ್ತಿದ್ದಾರೆ. ಅವರಿಗೆ ಊಟ, ತಿಂಡಿಯ ವ್ಯವಸ್ಥೆ ಇಲ್ಲವಾಗಿದೆ. ಉಕ್ರೇನ್ ಪೂರ್ವ ಭಾಗದಲ್ಲಿ ಜನರ ರಕ್ಷಣೆ ಕಷ್ಟ ಕಷ್ಟ ಎನ್ನುವಂತಾಗಿದೆ. ಇಲ್ಲಿ ಸಾವಿರಾರು ಕನ್ನಡಿಗರು ಇದ್ದು, ರಕ್ಷಣೆಗಾಗಿ ಮೊರೆ ಇಟ್ಟಿದ್ದಾರೆ.
Russia Ukraine Crisis:ರಷ್ಯಾ ತಡೆಗೆ ಉಕ್ರೇನ್ ತಂತ್ರ, ನಾಗರೀಕರ ಕೈಗೆ ಶಸ್ತ್ರಾಸ್ತ್ರ!
ಕಳೆದ ಎರಡು ದಿನಗಳಿಂದ ರಷ್ಯಾ ನಡೆಸಿದ ವೈಮಾನಿಕ, ಕ್ಷಿಪಣಿ ದಾಳಿಗಳಲ್ಲಿ ರಷ್ಯಾದ 10ಕ್ಕೂ ಹೆಚ್ಚು ಪ್ರಮುಖ ನಗರಗಳು ಭಾರೀ ಹಾನಿಗೆ ತುತ್ತಾಗಿವೆ. ಈ ನಗರಗಳನ್ನು ಬಹುತೇಕ ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವ ಮೂಲಕ, ಅವುಗಳ ಮೇಲೆ ರಷ್ಯಾ ಹಿಡಿತ ಸಾಧಿಸಿದೆ.