ಹಮಾಸ್‌ ವಿರುದ್ಧ ತಿರುಗಿಬಿದ್ದ ಇಸ್ರೇಲ್‌: ಪ್ಯಾಲೆಸ್ತೇನ್‌ ವಿರುದ್ಧ ಇಸ್ರೇಲ್‌ ಪ್ರಧಾನಿ ಪ್ರತೀಕಾರದ ಶಪಥ

Oct 8, 2023, 12:36 PM IST

ಇಸ್ರೇಲಿ ಪಡೆಗಳು ಮತ್ತು ಪ್ಯಾಲೆಸ್ತೀನ್‌ ಉಗ್ರರ ಗುಂಪು ಹಮಾಸ್ ನಡುವಿನ ಹೋರಾಟ ತೀವ್ರವಾಗಿದೆ. ಇಸ್ರೇಲ್(Israel) ಮೇಲಿನ ದಾಳಿ ಹಾಗೂ ಹಮಾಸ್‌ ಉಗ್ರರ ನಾಶ ಮಾಡಲು ಹೊರಟಿರೋ ಇಸ್ರೇಲ್‌ ಸೇನೆ - ಒಟ್ಟಾರೆ ಎರಡೂ ಕಡೆಗಳಲ್ಲಿ ನಡೆದ ದಾಳಿಯ ನಂತರ 500 ಕ್ಕೂ ಹೆಚ್ಚು ಜನ ಹತ್ಯೆಯಾಗಿದ್ದಾರೆ. ಆಪರೇಷನ್‌ ಐರನ್‌ ಸ್ವಾಡ್ ಹೆಸರಿನಲ್ಲಿ ಇಸ್ರೇಲ್‌ ಕಾರ್ಯಾಚರಣೆ ನಡೆಸುತ್ತಿದೆ. ಹಮಾಸ್‌ ಉಗ್ರರ ದಾಳಿಗೆ(Hamas attack) ಪ್ರತಿಕಾರವನ್ನು ತೆಗೆದುಕೊಳ್ಳುವುದಾಗಿ ಇಸ್ರೇಲ್‌ ಹೇಳಿದೆ. ಇಡೀ ಗಾಜಾ(gaza) ಚಿತ್ರಣವನ್ನೇ ಬದಲಿಸುತ್ತೇವೆ ಎಂದು ಇಸ್ರೇಲ್‌ ಪ್ರಧಾನಿ ಶಪಥ ಮಾಡಿದ್ದಾರೆ. ಇಸ್ರೇಲ್‌ ಮೇಲಿನ ದಾಳಿಯ ನಂತರ  ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡಿದ ಬೆಂಜಮಿನ್ ನೆತನ್ಯಾಹು, ನಮ್ಮ ಸೈನ್ಯವು ಗಾಜಾದ ಹಮಾಸ್‌ನಲ್ಲಿ ಪೂರ್ಣ ಬಲದೊಂದಿಗೆ ಪ್ರತಿದಾಳಿ ನಡೆಸಲಿದೆ ಎಂದು ಹೇಳಿದರು. "IDF (ಸೇನೆ) ಹಮಾಸ್‌ನ ಸಾಮರ್ಥ್ಯಗಳನ್ನು ನಾಶಮಾಡಲು ತನ್ನ ಎಲ್ಲಾ ಬಲವನ್ನು ಬಳಸುತ್ತಿದೆ. ನಾವು ಅವರನ್ನು ಕಹಿಯಾದ ಅಂತ್ಯಕ್ಕೆ ತಳ್ಳಲಿದ್ದೇವೆ. ಇಸ್ರೇಲ್ ಮತ್ತು ಅದರ ಜನರ ಮೇಲೆ ಅವರು ತಂದ ಈ ಕರಾಳ ದಿನವನ್ನು ಬಲದಿಂದ ಸೇಡು ತೀರಿಸಿಕೊಳ್ಳುತ್ತೇವೆ" ಎಂದು ಅವರು ಹೇಳಿದರು.

ಇದನ್ನೂ ವೀಕ್ಷಿಸಿ:  ಗೆಳೆಯನ ತಂಗಿ ಹುಟ್ಟುಹಬ್ಬಕ್ಕೆ ವಿಶ್‌ ಮಾಡಿದ್ದ ಸ್ನೇಹಿತರು: ಕರಳು ಹಿಂಡುತ್ತೆ ಒಬ್ಬೊಬ್ಬರ ಸಾವಿನ ಕಥೆ..!