Oct 24, 2023, 2:30 PM IST
ಹಮಾಸ್ ವಿರುದ್ಧ ಭೀಕರ ದಾಳಿ ನಡೆಸ್ತಾ ಇರೋ ಇಸ್ರೇಲ್, ಗಾಜಾ(Gaza) ಸೇರಿದಂತೆ ಹಲವು ಪ್ರದೇಶಗಳಲ್ಲಿ ದಾಂಗುಡಿ ಇಟ್ಟಿದೆ. ಉಗ್ರರ ಸಂಪೂರ್ಣ ನಾಶಕ್ಕೆ ಸನ್ನದ್ಧವಾಗಿದೆ. ಭಾನುವಾರ ರಾತ್ರಿಯಿಡೀ ಇಸ್ರೇಲ್(Israel) ವೈಮಾನಿಕ ದಾಳಿ ನಡೆಸಿತ್ತು. ಬರೀ ಈ ದಾಳಿಯಿಂದಾಗಿಯೇ, ಸುಮಾರು 50 ಕ್ಕೂ ಹೆಚ್ಚು ಪ್ಯಾಲೆಸ್ತೀನಿಗಳು ಹತರಾಗಿದ್ದಾರೆ ಅಂತ ಕೆಲವು ಮೂಲಗಳು ಹೇಳ್ತಿದ್ದಾವೆ. ಅಕ್ಟೋಬರ್ 7 ರಂದು ಶುರುವಾದ ಉಗ್ರರ ಅಟ್ಟಹಾಸಕ್ಕೆ, ಎರಡೇ ವಾರದಲ್ಲಿ ಅತ್ಯುಗ್ರ ಉತ್ತರ ಕೊಡೋಕೆ ಇಸ್ರೇಲ್ ಮುಂದಾಗಿದೆ.. ಇಸ್ಲಾಮಿಸ್ಟ್ ಚಳುವಳಿಯ ಹೆಸರಿನಲ್ಲಿ ಹಮಾಸ್(Hamas) ಉಗ್ರಗಾಮಿಗಳು ದಕ್ಷಿಣ ಇಸ್ರೇಲ್ ಮೇಲೆ ದಾಳಿ ನಡೆಸಿದ್ರು.. ಈ ದಾಳಿಯ ನಂತರ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ಘನಘೋರ ಯುದ್ಧವನ್ನೇ ಸಾರಿದೆ. ಈ ತನಕ ಇರೋ ಮಾಹಿತಿಯ ಪ್ರಕಾರ, ಹಮಾಸ್ ನಡೆಸಿದ ರಕ್ಕಸ ದಾಳಿಯಲ್ಲಿ 1400 ಇಸ್ರೇಲಿಗಳು ಹತರಾಗಿದ್ದಾರೆ.. ಆದ್ರೆ, ಇಸ್ರೇಲ್ ದಾಳಿಯಿಂದ ಗಾಜಾ ಪಟ್ಟಿಯಲ್ಲಿ ಐದು ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಅನ್ನೋ ಮಾಹಿತಿ ಇದೆ.. ಒಟ್ಟಾರೆಯಾಗಿ ಈ ಯುದ್ಧ ಅನ್ನೋ ಮಹಾವಿಪತ್ತು, ಹತ್ತಿರತ್ತಿರ 7 ಸಾವಿರಕ್ಕೂ ಹೆಚ್ಚು ಜೀವಗಳನ್ನ ಬಲಿ ತೆಗೆದುಕೊಂಡಿದೆ.. ಆದ್ರೆ ಇದು ಜಸ್ಟ್ ಎ ಬಿಗಿನಿಂಗ್.. ಅಸಲಿ ವಾರ್ ಈಗಿಂದ ಶುರು ಅಂತಿದೆ ಇಸ್ರೇಲ್.
ಇದನ್ನೂ ವೀಕ್ಷಿಸಿ: ಇಸ್ರೇಲ್ ಹಮಾಸ್ ಯುದ್ಧ: ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಭೀಕರ ಕೃತ್ಯಗಳ ದೃಶ್ಯ ಪ್ರದರ್ಶನ