Aug 6, 2023, 10:24 AM IST
ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಕ್ರಿಕೆಟ್ ಕ್ಷೇತ್ರದಲ್ಲಿ ಜಾಗತಿಕವಾಗಿ ಸದ್ದು ಮಾಡಿದ್ದ ಇಮ್ರಾನ್ ಖಾನ್ (ImranKhan) ಬಂಧಿಯಾಗಿದ್ದಾರೆ. ಉಗ್ರಸ್ವರ್ಗ ಪಾಕಂಡಿ ಪಾಕಿಸ್ತಾನದಲ್ಲಿ(Pakistan) ಇದೊಂದು ವಿದ್ಯಮಾನ ದೊಡ್ಡ ಮಟ್ಟಿಗೆ ಸದ್ದು ಮಾಡ್ತಾ ಇದೆ. ತೋಷಖಾನಾ ಕೇಸ್ ಮಾಜಿ ಪ್ರಧಾನಿಗೆ ಬೆಂಬಿಡದ ಭೂತವಾಗಿ ಕಾಡ್ತಾ ಇದೆ. ಪಾಕಿಸ್ತಾನ ಇದೊಂದು ದೇಶದ ಹೆಸರು ಕೇಳಿದ್ರೆ ಎಲ್ಲಿಂದ ನಗಬೇಕು ಅನ್ನೋದೇ ಅರ್ಥವಾಗಲ್ಲ. ಕೃಷಿಗೆ ಹೇಳಿ ಮಾಡಿಸಿದ ಭೂಮಿ ಹೊಂದಿರೋ ದೇಶ.. ಆದ್ರೆ ಅಲ್ಲಿ ಧರ್ಮಾಂಧರೆ ತುಂಬಿ ಹೋಗಿರೋದರಿಂದ ಬೀಜದ ಬದಲು ಬಾಂಬ್ ಹಾಕೋದೇ ಕೆಲಸ ಆಗಿ ಬಿಟ್ಟಿದೆ. ಸಮರ್ಥರ ಕೈಗೆ ಆ ದೇಶ ಸಿಕ್ಕಿದಿದ್ರೆ ಇವತ್ತು ಅಮ್ಮಾ ತಾಯಿ ಅನ್ನೋ ಸನ್ನಿವೇಶ ಬರ್ತಾ ಇರ್ಲಿಲ್ಲಾ. ಭಿಕ್ಷಾಪಾತ್ರೆಯೇ ದೇಶದ ಆಸ್ತಿಯಾಗಿದೆ. ಸಿಕ್ಕ ಸಿಕ್ಕವರ ಬಳಿ ಬೇಡಿಕೊಂಡು ತಿನ್ನೋದೇ ಬದುಕಾಗಿದೆ. ಇಂಥ ಪಾಪಿಸ್ತಾನದಲ್ಲಿ ಈಗ ಭಾರಿ ತಲ್ಲಣ ಸೃಷ್ಟಿಯಾಗಿದೆ. ಅದಕ್ಕೆ ಕಾರಣ ಪಾಕ್‌ನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅಂದರ್(Arrest) ಆಗಿರೋದು. ಇಸ್ಲಾಮಾಬಾದ್ನಲ್ಲಿ ವಿಶ್ವ ವಿಖ್ಯಾತ ಕ್ರಿಕೇಟರ್ ಹಾಗೂ ಪಾಕಿಸ್ತಾನದ ಮಾಜಿ ಪ್ರಧಾನಿಯ ಬಂಧನದ ಹಿನ್ನಲೆ ಭಾರಿ ಹೋರಾಟಗಳು ಆಗ್ತಾ ಇವೆ. ತೋಷಾಖಾನಾ ಹಗರಣದಲ್ಲಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‍ಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದ್ದು, ಇಮ್ರಾನ್ ಖಾನ್ ಸಂಸತ್ ಸ್ಥಾನವನ್ನು 5 ವರ್ಷ ಕಾಲ ಅನರ್ಹಗೊಳಿಸಿ ಪಾಕಿಸ್ತಾನದ ಕೋರ್ಟ್ ಆದೇಶ ಹೊರಡಿಸಿದೆ.
ಇದನ್ನೂ ವೀಕ್ಷಿಸಿ: ನನಗೆ ಆ ರೀತಿಯ ತಮ್ಮ ಇಡೀ ಜನ್ಮದಲ್ಲೆ ಇಲ್ಲ..ಡಿಕೆಶಿಗೆ ಹೆಚ್‌ಡಿಕೆ ಟಾಂಗ್