ವಿಶ್ವದ ನಂ.1 ಶ್ರೀಮಂತ ಮಸ್ಕ್; ಬೈಡೆನ್‌ಗೆ ಅಧಿಕಾರ ಹಸ್ತಾಂತರಿಸಲು ಒಪ್ಪಿದ ಟ್ರಂಪ್

Jan 8, 2021, 12:14 PM IST

ವಾಷಿಂಗ್‌ಟನ್ (ಜ. 08): ಇತ್ತೀಚೆಗಷ್ಟೇ ವಿಶ್ವದ 2ನೇ ಸಿರಿವಂತ ಪಟ್ಟ ದಕ್ಕಿಸಿಕೊಂಡಿದ್ದರು ಟೆಸ್ಲಾ ಹಾಗೂ ಸ್ಪೇಸ್ ಎಸ್ ಮುಖ್ಯಸ್ಥ ಎಲೆನ್ ಮಸ್ಕ್. ಇದೀಗ ಟೆಸ್ಲಾ ಶೇರುಗಳ ಮೌಲ್ಯ ಮಾರುಕಟ್ಟೆಯಲ್ಲಿ ದಿಢೀರ್ ಏರಿದ್ದರಿಂದ ವಿಶ್ವದ ಮೊದಲ ಶ್ರೀಮಂತ ಸ್ಥಾನಕ್ಕೆ ಎಲೆನ್ ಜಿಗಿದಿದ್ದಾರೆ. 

UK ಯಲ್ಲಿ ಸಿಲುಕಿರುವ ಕನ್ನಡಿಗರ ಏರ್‌ಲಿಫ್ಟ್‌ ; ಭಾರತದಲ್ಲಿ ಹಕ್ಕಿಜ್ವರ ಅಲರ್ಟ್!

ಸಾಕಷ್ಟು ರಂಪಾಟ, ರಾದ್ಧಾಂತ ಮುಗಿದ ನಂತರ ಉಭಯ ಸದನಗಳು ಕಲಾಪ ನಡೆಸಿ, ಜೋ  ಬೈಡನ್ ಅವರ ಆಯ್ಕೆಯನ್ನು ಅಧಿಕೃತಗೊಳಿಸಿದೆ. ಜ.20ರಂದು ಬೈಡನ್ ಅವರಿಗೆ ಅಧಿಕಾರ ಹಸ್ತಾಂತರಿಸುವುದಾಗಿಯೂ ಟ್ರಂಪ್ ಘೋಷಿಸಿದ್ದಾರೆ. ಅಮೆರಿಕ, ಜರ್ಮನಿ, ರಷ್ಯಾ, ಭಾರತದ ಕಂಪನಿಗಳು ಕೊರೋನಾ ವೈರಸ್‌ಕೆ ಲಸಿಕೆ ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿವೆ. ಈ ಬೆನ್ನಲ್ಲೇ ಬ್ರಿಟನ್‌ನಲ್ಲಿ ಕೋವಿಡ್‌ ವಾಸಿ ಮಾಡಬಲ್ಲ ಔಷಧಗಳನ್ನು ಸಂಶೋಧಿಸಲಾಗಿದೆ. ಸೋಂಕಿನ ಪರಿಣಾಮದ ಬಗ್ಗೆ ಮತ್ತಷ್ಟು ಸಂಶೋಧನೆಗಳು ನಡೆದಿವೆ. ಈ ವೈರಸ್ ಮೆದುಳಿಗೆ ತಗಲುವುದಿಲ್ಲ. ಆದರೆ, ಮೆದುಳಿನ ನರಕೋಶವನ್ನು ಹಾನಿಗೊಳಿಬಹುದಂತೆ. ಇವೆಲ್ಲಾ ಸುದ್ದಿಗಳ ಬಗ್ಗೆ ಇನ್ನಷ್ಟು ಮಾಹಿತಿ ಟ್ರೆಂಡಿಂಗ್‌ ನ್ಯೂಸ್‌ನಲ್ಲಿ