ಚೀನಾ ಹಾಗೂ ಅಮೆರಿಕಾ ಸಂಬಂಧ ಎಣ್ಣೆ ಸೀಗೆಕಾಯಿ ಇದ್ದಂತೆ. ಒಬ್ಬರನ್ನೊಬ್ಬರು ಮಟ್ಟ ಹಾಕಲು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಟಿಬೆಟ್ ಮೇಲೆ ಚೀನಾ ಹಿಡಿತವನ್ನು ಕುಗ್ಗಿಸುವ ಮಹತ್ವದ ಮಸೂದೆಯೊಂದಕ್ಕೆ ಸಹಿ ಹಾಕಿದ್ದಾರೆ.
ನವದೆಹಲಿ (ಡಿ. 30): ಚೀನಾ ಹಾಗೂ ಅಮೆರಿಕಾ ಸಂಬಂಧ ಎಣ್ಣೆ ಸೀಗೆಕಾಯಿ ಇದ್ದಂತೆ. ಒಬ್ಬರನ್ನೊಬ್ಬರು ಮಟ್ಟ ಹಾಕಲು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಟಿಬೆಟ್ ಮೇಲೆ ಚೀನಾ ಹಿಡಿತವನ್ನು ಕುಗ್ಗಿಸುವ ಮಹತ್ವದ ಮಸೂದೆಯೊಂದಕ್ಕೆ ಸಹಿ ಹಾಕಿದ್ದಾರೆ.
ಈ ಕಾಯ್ದೆಯ ಪ್ರಕಾರ ಟಿಬೆಟ್‌ನಲ್ಲಿ ತನ್ನದೇ ಆದ ದೂತಾವಾಸ ಸ್ಥಾಪಿಸುವ ಉದ್ದೇಶವನ್ನು ಅಮೆರಿಕ ಹೊಂದಿದೆ ಹಾಗೂ ಬೌದ್ಧರ ಧರ್ಮಗುರು ದಲೈಲಾಮಾ ಉತ್ತರಾಧಿಕಾರಿ ನೇಮಕದಲ್ಲಿ ಚೀನಾ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಿ, ಕೇವಲ ಟಿಬೆಟನ್ ಬೌದ್ಧ ಸಮುದಾಯಕ್ಕೆ ಪರಮಾಧಿಕಾರ ನೀಡಲು ಉದ್ದೇಶಿಸಲಾಗಿದೆ.