ಅಮೆರಿಕದ ಸಂಸತ್‌ ಭವನದಲ್ಲಿ ಟ್ರಂಪ್ ಬೆಂಬಲಿಗರ ದಾಂಧಲೆ, ಮೋದಿಯಿಂದ ಖಂಡನೆ

Jan 8, 2021, 4:17 PM IST

ವಾಷಿಂಗ್‌ಟನ್ (ಜ. 08): ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡೆನ್ ಗೆದ್ದರೂ ಸಹ ಟ್ರಂಪ್ ಮಾತ್ರ ಸೋಲೊಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಬೈಡೆನ್‌ಗೆ ಅಧಿಕಾರ ಬಿಟ್ಟು ಕೊಡುವ ಮೊದಲು ಸಾಕಷ್ಟು ಹೈಡ್ರಾಮಾ ನಡೆಸಿದ್ದಾರೆ.  
ಸಂಸತ್‌ ಭವನದಲ್ಲಿ ಡೊನಾಲ್ಡ್‌ ಟ್ರಂಪ್‌  ಬೆಂಬಲಿಗರು ದಾಂಧಲೆ ನಡೆಸಿದ್ದಾರೆ.  ಅವರನ್ನು ಹಿಮ್ಮೆಟ್ಟಿಸಲು ಪೊಲೀಸರು ಪೆಪ್ಪರ್‌ ಸ್ಪ್ರೇ ಸಿಡಿಸಿದರೂ ಪ್ರಯೋಜನವಾಗಲಿಲ್ಲ. 

ವಿಶ್ವದ ನಂ. 1 ಶ್ರೀಮಂತ ಮಸ್ಕ್; ಬೈಡೆನ್‌ಗೆ ಅಧಿಕಾರ ಹಸ್ತಾಂತರಿಸಲು ಒಪ್ಪಿದ ಟ್ರಂಪ್

ಪೊಲೀಸರನ್ನು ತಳ್ಳಿಕೊಂಡು ಕಟ್ಟಡದೊಳಕ್ಕೆ ನುಗ್ಗಿದ ಅವರು ಅಲ್ಲಿ ಕೈಗೆ ಸಿಕ್ಕಿದ್ದನ್ನೆಲ್ಲ ಎತ್ತಿ ಎಸೆದು ಒಡೆದುಹಾಕಿದರು. ಕಿಟಕಿ ಗಾಜು, ಹೂಕುಂಡ, ಬಾಗಿಲುಗಳನ್ನು ಧ್ವಂಸಗೊಳಿಸಿದರು. ನಂತರ ಎಲ್ಲಿ ಅವರು ಎಲ್ಲಿ ಅವರು ಎಂದು ಕೇಳುತ್ತಾ ಸಂಸತ್‌ ಕಲಾಪ ನಡೆಯುತ್ತಿದ್ದ ಜಂಟಿ ಸಮಾವೇಶದ ಸಭಾಂಗಣಕ್ಕೆ ನುಗ್ಗಿದರು. ಅಲ್ಲಿಯವರೆಗೆ ಕುರ್ಚಿ, ಬೆಂಚುಗಳ ಕೆಳಗೆ ಅವಿತು ಕುಳಿತಿದ್ದ ಸಂಸದರು ಹೇಗೋ ಹೊರಗೆ ಓಡಿ ತಪ್ಪಿಸಿಕೊಂಡರು. ಏನಿದು ಟ್ರಂಪ್ ಬೆಂಬಲಿಗರ ಮೊಂಟಾಟ..?