
ಮದರ್ ಆಫ್ ಆಲ್ ಬಾಂಬ್.. ಇದು ಅಮೆರಿಕಾ ತನ್ನ ಬಳಿ ಇರೋ ಶಕ್ತಿಶಾಲಿ ಬಾಂಬಿಗೆ ಕೊಟ್ಟಿರೋ ಹೆಸರು.. ಹಾಗಾದ್ರೆ ಆ ಬಾಂಬ್ ಇಸ್ರೇಲಿನ ಕೈಗೆ ಕೊಟ್ಟರೆ, ಇರಾನ್ ನಾಶವಾಗುತ್ತಾ? ಇಸ್ರೇಲ್ ಯುದ್ಧ ಗೆದ್ದುಬಿಡತ್ತಾ?
ಮಧ್ಯಪ್ರಾಚ್ಯ ಈಗ ಯುದ್ಧ ಭೂಮಿ.. ಇರಾನ್ ಇಸ್ರೇಲ್ ಅನ್ನೋ ಎರಡು ದೇಶಗಳು, ಇಬ್ಬರಲ್ಲಿ ಒಬ್ಬರು ಮಾತ್ರ ಉಳಿಯೋ ಮಟ್ಟಕ್ಕೆ ಕದನ ಶುರುಮಾಡಿಕೊಂಡಿದ್ದಾರೆ.. ಈ ಕದನ ಕಣದಲ್ಲಿ ಸೋತವರು, ಅಕ್ಷರಶಃ ಸರ್ವನಾಶವಾದ ಹಾಗೇ ಲೆಕ್ಕ.. ಇದರ ಮಧ್ಯೆ, ಅಮೆರಿಕಾದ ಕಣ್ಣು ಈಗ, ಇರಾನಿನ ಅದೊಂದು ಊರಿನ ಮೇಲೆ ಬಿದ್ದಿದೆ ಅನ್ನೋ ಸುದ್ದಿ ಇದೆ.. ಅಷ್ಟಕ್ಕೂ ಆ ಊರು ಯಾವ್ದು? ಅದರ ಮೇಲೆ ಅಮೆರಿಕಾದ ಜಿದ್ದೇನು? ಆ ಊರು ನಾಶವಾದ್ರೆ, ಇರಾನಿನ ಗತಿ ಏನು?