ಶ್ರೀಲಂಕಾದಲ್ಲಿ ಔಷಧಿಗಳಿಗಾಗಿ ಜನರು ಉದ್ದುದ್ದ ಕ್ಯೂ ನಿಂತಿದ್ದಾರೆ. ಎಷ್ಟು ಹೊತ್ತು ಕಾದರೂ ಔಷಧಿಗಳು ಸಿಗದೇ ಪರದಾಡುತ್ತಿದ್ದಾರೆ. ಬರೀ ಔಷಧಿಗಳು ಮಾತ್ರವಲ್ಲ ರೇಷನ್, ಗ್ಯಾಸ್, ಅಗತ್ಯ ವಸ್ತುಗಳು ಸಿಗುತ್ತಿಲ್ಲ.
ಭೀಕರ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲೀಗ ಔಷಧಿಗಳ ಬಿಕ್ಕಟ್ಟು ಎದುರಾಗಿದೆ. ದೇಶದಲ್ಲಿ ಜನ ಕಾಯಿಲೆ ಬಿದ್ದರೂ, ಅಪಘಾತ ಮಾಡಿಕೊಂಡರೂ ಚಿಕಿತ್ಸೆ ನೀಡಲು ಅಗತ್ಯ ಪ್ರಮಾಣದ ಔಷಧಗಳಿಲ್ಲ. ಈ ಹಿನ್ನೆಲೆಯಲ್ಲಿ ಸ್ವತಃ ವೈದ್ಯರು ಜನರಿಗೆ ಕಾಯಿಲೆ ಬೀಳಬೇಡಿ, ಅಪಘಾತ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಔಷಧಿಗಳಿಗಾಗಿ ಜನರು ಉದ್ದುದ್ದ ಕ್ಯೂ ನಿಂತಿದ್ದಾರೆ. ಎಷ್ಟು ಹೊತ್ತು ಕಾದರೂ ಔಷಧಿಗಳು ಸಿಗದೇ ಪರದಾಡುತ್ತಿದ್ದಾರೆ. ಬರೀ ಔಷಧಿಗಳು ಮಾತ್ರವಲ್ಲ ರೇಷನ್, ಗ್ಯಾಸ್, ಅಗತ್ಯ ವಸ್ತುಗಳು ಸಿಗುತ್ತಿಲ್ಲ. ಅಲ್ಲಿನ ಸಾರ್ವಜನಿಕರನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಮಾತನಾಡಿಸಿದಾಗ, 'ದಯವಿಟ್ಟು ನಮಗೆ ಸಹಾಯ ಮಾಡಿ, ಭಾರತ ನಮ್ಮ ದೊಡ್ಡಣ್ಣ' ಇದ್ದ ಹಾಗೆ ಎಂದು ಮನವಿ ಮಾಡಿದ್ಧಾರೆ.