ಚೀನಾದಲ್ಲಿ ಕೋವಿಡ್‌ ಸ್ಫೋಟ: ಬ್ರಿಟನ್‌ಗೆ ಅಪ್ಪಳಿಸಿದೆ ಹೊಸ ಕೋವಿಡ್‌ ತಳಿ

ಚೀನಾದಲ್ಲಿ ಕೋವಿಡ್‌ ಸ್ಫೋಟ: ಬ್ರಿಟನ್‌ಗೆ ಅಪ್ಪಳಿಸಿದೆ ಹೊಸ ಕೋವಿಡ್‌ ತಳಿ

Published : Oct 24, 2021, 01:22 PM IST

ಕೊರೋನಾ ತವರು ಚೀನಾದಲ್ಲಿ ಮತ್ತೆ ಸೋಂಕು ಸ್ಫೋಟಗೊಳ್ಳುತ್ತಿದ್ದು ಶನಿವಾರ ರಾಜಧಾನಿ ಬೀಜಿಂಗ್‌ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ 43 ಕೇಸ್‌ ದಾಖಲಾಗಿದೆ. 
 

ಬೀಜಿಂಗ್ (ಅ. 24): ಕೊರೋನಾ (CoronaVirus) ತವರು ಚೀನಾದಲ್ಲಿ ಮತ್ತೆ ಸೋಂಕು ಸ್ಫೋಟಗೊಳ್ಳುತ್ತಿದ್ದು ಶನಿವಾರ ರಾಜಧಾನಿ ಬೀಜಿಂಗ್‌ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ 43 ಕೇಸ್‌ ದಾಖಲಾಗಿದೆ. 

ಕೋವಿಡ್‌ ಬಗ್ಗೆ ಚೀನಾದಲ್ಲಿ ಈಗ ‘ಶೂನ್ಯ ಸಹಿಷ್ಣುತೆ’ (Zero Tolarance) ಇದೆ. ಹೀಗಾಗಿ ಗಡಿಗಳಲ್ಲಿ ನಿರ್ಬಂಧಗಳಿವೆ. ಕೇಸು ವರದಿಯಾದರೆ ತಕ್ಷಣವೇ ಲಾಕ್‌ಡೌನ್‌ (Lockdown) ಘೋಷಿಸಲಾಗುತ್ತದೆ. ವೈರಸ್‌ ಹಬ್ಬುತ್ತಿರುವ ಭಾಗಗಳಲ್ಲಿ ಶಾಲಾ-ಕಾಲೇಜುಗಳು, ಪ್ರವಾಸಿ ತಾಣಗಳು, ಚಿತ್ರಮಂದಿರಗಳು ಸೇರಿದಂತೆ ಮನರಂಜನೆ ಸ್ಥಳಗಳನ್ನು ಮುಚ್ಚಲಾಗಿದೆ. ಅಲ್ಲದೆ ಕೆಲ ಮನೆಗಳ ಕಾಂಪೌಂಡ್‌ಗಳ ಮೇಲೂ ನಿರ್ದಿಷ್ಟಲಾಕ್‌ಡೌನ್‌ ಹೇರಲಾಗಿದೆ. 

ಬ್ರಿಟನ್‌ನಲ್ಲಿ ಕೊರೋನಾ ವೈರಸ್‌ನ ಮತ್ತೊಂದು ಎ.ವೈ 4.2 ಹೆಸರಿನ ಹೊಸ ತಳಿಯೊಂದು ಪತ್ತೆಯಾಗಿದೆ. ಇದರ ಪರಿಣಾಮ ಬ್ರಿಟನ್‌ನಲ್ಲಿ ಶುಕ್ರವಾರ ಒಂದೇ ದಿನ 52 ಸಾವಿರಕ್ಕೂ ಹೆಚ್ಚು ಮಂದಿಗೆ ವೈರಸ್‌ ವ್ಯಾಪಿಸಿದೆ. ಇದೇ ವರ್ಷದ ಜು.17ರ ಬಳಿಕ ಇದೇ ಮೊದಲ ಬಾರಿಗೆ ಬ್ರಿಟನ್‌ನಲ್ಲಿ ಈ ಪ್ರಮಾಣದ ವೈರಸ್‌ ಹಾವಳಿ ಕಂಡುಬಂದಿದೆ.
 

22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
44:18ಡೊನಾಲ್ಡ್ ಟ್ರಂಪ್ ಶಾಂತಿ ಸೂತ್ರ: ಇಸ್ರೇಲ್-ಗಾಜಾ ಯುದ್ಧಕ್ಕೆ ಬೀಳುತ್ತಾ ತೆರೆ?
22:58ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ: ಹೆಂಡತಿ ಮಗನ ಕಣ್ಣೆದುರೇ ನಡೆಯಿತು ಘೋರ ಕೃತ್ಯ!
18:07ಕೊಲೆಗಡುಕರ ಟಾರ್ಗೆಟ್ ಆಗಿದ್ದೇಕೆ ಟ್ರಂಪ್ ಆಪ್ತ? ಅಮೆರಿಕಾದ ಪ್ರಭಾವಿಯ ಹತ್ಯೆಗೂ ಮುನ್ನ ಆಗಿದ್ದೇನು?
19:06ಕಿಮ್ ಕುಟುಂಬವೇ ರಹಸ್ಯಗಳ ಗೂಡು, ನಿಗೂಢ ರಹಸ್ಯ ಭೇದಿಸಿದಾಗ ಬಯಲಾಗಿದ್ದೇನು?
20:30ತ್ರಿಮೂರ್ತಿಗಳ ಶಕ್ತಿ ಪ್ರದರ್ಶನ! ಅಮೆರಿಕಾ ತಲ್ಲಣ! 3 ರಾಷ್ಟ್ರಗಳು ಒಟ್ಟಾದರೆ ಟ್ರಂಪ್ ಹುಚ್ಚಾಟ ದಿ ಎಂಡ್!