ಕೊರೋನಾ ಸಂಕಷ್ಟ: ವಿದೇಶಗಳು ಭಾರತದ ನೆರವಿಗೆ ಧಾವಿಸುತ್ತಿರುವುದೇಕೆ.?

May 11, 2021, 3:59 PM IST

ಕೊರೋನಾ ಎರಡನೇ ಅಲೆ ಭಾರತವನ್ನು ತೀವ್ರವಾಗಿ ಕಾಡಿದೆ. ಇದರ ನಿಯಂತ್ರಣಕ್ಕೆ ಈಗಾಗಲೇ ಸರ್ಕಾರ ಕಟ್ಟುನಿಟ್ಟಿನ ಕ್ರಮ ವಹಿಸಿದ್ದರೂ ಸೋಂಕು ಕಡಿಮೆಯಾಗಿಲ್ಲ. ಆಕ್ಸಿಜನ್, ವ್ಯಾಕ್ಸಿನ್, ಬೆಡ್‌ಗಳ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಅಮೆರಿಕ, ಬ್ರೆಜಿಲ್, ರಷ್ಯಾ, ಜಪಾನ್, ದಕ್ಷಿಣ ಕೋರಿಯಾ ಹೀಗೆ ವಿಶ್ವದ ನಾನಾ ರಾಷ್ಟ್ರಗಳು ಭಾರತ ನೆರವಿಗೆ ಧಾವಿಸಿವೆ. ಜಗತ್ತಿಗೆ ಸಂಜೀವಿನಿ ಕೊಟ್ಟ ಭಾರತಕ್ಕೆ ನೆರವು ನೀಡುವುದೇ ನಮ್ಮ ಪುಣ್ಯ ಎನ್ನುವ ರೀತಿ ವಿದೇಶಿ ಗಣ್ಯರು ಹೇಳಿದ್ದಾರೆ.