Jan 22, 2021, 12:24 PM IST
ವಾಷಿಂಗ್‌ಟನ್ (ಜ. 22): ಮೊದಲೇ ಘೋಷಿಸಿದಂತೆ ಅಮೆರಿಕ ಹೊಸ ಅಧ್ಯಕ್ಷ ಜೋ ಬೈಡನ್ ನೂರು ದಿನಗಳ ಕಾಲ ಮಾಸ್ಕ್ ಧಾರಣೆ ಕಡ್ಡಾಯಗೊಳಿಸಿದ್ದಾರೆ. ಅಂತರಾಜ್ಯ ವಿಮಾನ, ರೈಲು ಮತ್ತು ಬಸ್‌ಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಹಾಗೂ ಹೊರ ದೇಶಗಳಿಂದ ಅಮೆರಿಕಕ್ಕೆ ಆಗಮಿಸುವ ಪ್ರಯಾಣಿಕರಿಗೆ ಕ್ವಾರಂಟೈನ್ ನಿಯಮ ಜಾರಿಗೊಳಿಸಿದ್ದಾರೆ.
ಶಿವಮೊಗ್ಗ ಹುಣಸೋಡಿನಲ್ಲಿ ಭೀಕರ ಸ್ಫೋಟ, ಮೋದಿ ಸಂತಾಪ
ಟ್ರಂಪ್ ಶ್ವೇತ ಭವನದಿಂದ ನಿರ್ಗಮಿಸುವಾಗ ಖ್ಯಾತ ಗಾಯಕ ಫ್ರಾಂಕ್ ಸಿಂತಾರಾ ಹಾಡಿದ ಮೈ ವೇ ಗೀತೆಯನ್ನು ಹಿನ್ನಲೆ ಸಂಗೀತವಾಗಿ ಪ್ಲೇ ಮಾಡಿದ್ದಕ್ಕೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ ಸಲಿಂಗಿಗಳಿಗೆ ಸಮಾನ ಹಕ್ಕು ನೀಡಲು ಬೈಡನ್ ಸರಕಾರ ಬದ್ಧವಾಗಿದೆ. ಆದರೆ, ಈ ನಿರ್ಧಾರದಿಂದ ಹೆಣ್ಣು ಮಕ್ಕಳ ಹಕ್ಕನ್ನು ಕಿತ್ತು ಕೊಳ್ಳಬಹುದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಪದಗ್ರಹಣ ಸಮಾರಂಭದಲ್ಲಿ ಕಮಲಾ ಹ್ಯಾರೀಸ್ ಮುತ್ತಿನ ಆಭರಣವನ್ನು ತೊಟ್ಟು, ನೇರಳೆ ಬಣ್ಣದ ಶೇಡ್ ಇರುವ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದು ಮೆಚ್ಚುಗೆಗೆ ಪಾತ್ರವಾಗಿದೆ. ಕಮಲಾಗೆ ಫ್ಯಾಷನ್ ಸೆನ್ಸ್ ಇಲ್ಲ ಅಂದವರಿಗೆ ಇದೇ ಉತ್ತರ..! ಇವೆಲ್ಲಾ ಸುದ್ದಿಗಳ ಬಗ್ಗೆ ವಿವರವಾದ ಮಾಹಿತಿ ಟ್ರೆಂಡಿಂಗ್ ನ್ಯೂಸ್ ನಲ್ಲಿ