May 24, 2022, 10:00 PM IST
ಕ್ಯಾನ್‌ಬೆರಾ(ಮೇ 24): ಉತ್ತರ ಅಟ್ಲಾಂಟಿಕ್ ಮಹಾಸಾಗರದಲ್ಲಿರುವ ಕುಖ್ಯಾತ ಬರ್ಮುಡಾ ಟ್ರಯಾಂಗಲ್‌ನಲ್ಲಿ (Bermuda Triangle) ಇದ್ದಕ್ಕಿದ್ದಂತೆ ಹಡಗುಗಳು ಹಾಗೂ ವಿಮಾನಗಳ ವಿಲಕ್ಷಣವಾಗಿ ಕಣ್ಮರೆಯಾಗುವ ರಹಸ್ಯವನ್ನು ತಾವು ಬೇಧಿಸಿರುವುದಾಗಿ ಆಸ್ಪ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯದ (Sydney University) ಸಂಶೋಧನಾ ವಿದ್ಯಾರ್ಥಿ ಕ್ರುಸ್ಜೆಲ್ನಿಕಿ ಹೇಳಿ ಕೊಂಡಿದ್ದಾರೆ.
ಇದನ್ನೂ ನೋಡಿ: ಗುಡುಗು ಸಿಡಿಲು ಸಹಿತ ಮಳೆಗೆ ತತ್ತರಿಸಿದ ರಾಷ್ಟ್ರ ರಾಜಧಾನಿ: ದೆಹಲಿಯಲ್ಲಿ ಜನಜೀವನ ಅಸ್ತವ್ಯಸ್ತ
ಈ ದುರ್ಘಟನೆಗಳು ಯಾವುದೇ ಅಲೌಕಿಕ ಶಕ್ತಿಯಿಂದಾಗಿ ನಡೆಯುವುದಿಲ್ಲ. ಬದಲಾಗಿ ಪ್ರತಿಕೂಲ ಹವಾಮಾನ ಅಥವಾ ಮಾನವನ ತಪ್ಪುಗಳಿಂದಲೇ ಸಂಭವಿಸಿವೆ ಎಂದಿದ್ದಾರೆ ಕಾರ್ಲ್. ಬರ್ಮುಡಾ, ಫ್ಲೋರಿಡಾ ಹಾಗೂ ಪೋರ್ಟೊರಿಕೋ ಪ್ರದೇಶದಲ್ಲಿರುವ ಸುಮಾರು 70 ವರ್ಷಗಳಿಂದಲೂ ನಿಗೂಢವೆನಿಸಿಕೊಂಡ ಬರ್ಮುಡಾ ಟ್ರಯಾಂಗಲ್‌ನಲ್ಲಿ ಹಡಗು, ವಿಮಾನ ರಹಸ್ಯವಾಗಿ ಕಣ್ಮರೆಯಾಗುತ್ತಿದ್ದವು.
ಆದರೆ ಇದರ ಹಿಂದೆ ಜನರು ನಂಬಿದಂತೆ ಯಾವುದೇ ಅನ್ಯಗ್ರಹ ಜೀವಿಗಳ (Aliens) ಅಥವಾ ಕಳೆದುಹೋದ ಅಟ್ಲಾಂಟಿಕ್ ನಗರದ ಬೆಂಕಿ ಹರಳುಗಳೊಂದಿಗೆ ಯಾವುದೇ ಸಂಬಂಧವಿಲ್ಲ. ಇವು ವಿಮಾನ ಚಾಲಕರು ಅಥವಾ ಹಡಗಿನ ನಾವಿಕರ ತಪ್ಪುಗಳು ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ಸಂಭವಿಸಿವೆ ಎಂದಿದ್ದಾರೆ.