Dec 24, 2021, 6:34 PM IST
ಬಾಹ್ಯಾಕಾಶ (Space) ಎನ್ನುವುದು ಸಾಮಾನ್ಯರಿಗೆ ಅಚ್ಚರಿಯ ಜಗತ್ತು. ಅಲ್ಲಿನ ವಿದ್ಯಮಾನಗಳು ಸುಲಭಕ್ಕೆ ಅರ್ಥವಾಗುವಂತದ್ದಲ್ಲ. ಅಲ್ಲಿಗೆ ಹೋಗುವುದು, ಅಲ್ಲಿದ್ದು ಬರುವುದು ಸುಲಭದ ಮಾತಲ್ಲ. ಅಲ್ಲಿಗೆ ಹೋಗುವ ಗಗನ ಯಾತ್ರಿಗಳು (Astronaut) ಹೇಗಿರ್ತಾರೆ, ಅವರ ದಿನಚರಿಗಳು ಹೇಗಿರುತ್ತವೆ ಎಂಬ ಕುತೂಹಲ ಇದ್ದೇ ಇರುತ್ತದೆ.
ಗಗನಯಾತ್ರಿ ಮತಿಯಾಸ್ ಮೌರೆ ಎಂಬುವವರು ಸಹೋದ್ಯೋಗಿಯಿಂದ ಹೇರ್ ಕಟ್ (Hair Cut) ಮಾಡಿಸಿಕೊಂಡಿರುವ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಒಂದೇ ಒಂದು ಕೂದಲು ಕೆಳಗೆ ಬೀಳದಂತೆ ಹೇರ್ ಕಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣ ಶಕ್ತಿ ಇಲ್ಲದ ಕಾರಣ ಅಲ್ಲಿ ಯಾವ ವಸ್ತುವೂ ಇಟ್ಟಲ್ಲಿ ಇರುವುದಿಲ್ಲ. ಎಲ್ಲವೂ ಹಾರಾಡುತ್ತಾ ಇರುತ್ತವೆ. ಈ ಹಿಂದೆ ಗಗನ ಯಾತ್ರಿಗಳು ಬರ್ತಡೇ ಮಾಡಿರುವುದು, ಪಿಜ್ಜಾ ಪಾರ್ಟಿ ಮಾಡಿರುವುದು ವೈರಲ್ ಆಗಿತ್ತು.