Oct 16, 2023, 11:32 PM IST
ಟೆಲ್ ಅವೀವ್ (ಅ.16): ಇಸ್ರೇಲ್ ರಣಾಂಗಣದಿಂದ ವರದಿ ಮಾಡುತ್ತಿರುವ ದಕ್ಷಿಣ ಭಾರತದ ಏಕೈಕ ಚಾನೆಲ್ ಸುವರ್ಣ ನ್ಯೂಸ್ ಯುದ್ಧಭೂಮಿಯ ವಾಸ್ತವಾಂಶಗಳನ್ನು ಜನರಿಗೆ ತಿಳಿಸಿದ. ಇಸ್ರೇಲ್‌ನಲ್ಲಿ ಯುದ್ಧಭೂಮಿಗೆ ವರದಿಗಾರಿಕೆಯಲ್ಲಿರುವ ಅಜಿತ್ ಹನಮಕ್ಕನವರ್, ಇಸ್ರೇಲ್‌ನಲ್ಲಿರುವ ಬಾಂಬ್ ಶೆಲ್ಟರ್‌ಗಳ ವಿಶೇಷತೆಯನ್ನು ತಿಳಿಸಿದ್ದಾರೆ.
ಮೊದಲೇ ತಿಳದಿರುವ ಹಾಗೆ ಇಸ್ರೇಲ್ ಜನತೆಗೆ ರಕ್ಷಣಾ ಕವಚ ಅಂತಿದ್ದರೆ ಅದು ಬಾಂಬ್ ಶೆಲ್ಟರ್. ತನ್ನ ಸುತ್ತಲಿರುವ ಶತ್ರುಗಳನ್ನು ಯೋಚಿಸಿಯೇ ಇಸ್ರೇಲ್ ತನ್ನೆಲ್ಲಾ ನಾಗರೀಕರಿಗೆ ಅವರ ಮನೆಯ ಬೇಸ್‌ಮೆಂಟ್‌ಗಳಲ್ಲಿ ಬಾಂಬ್ ಶೆಲ್ಟರ್‌ಗಳ ನಿರ್ಮಾಣವನ್ನು ಕಡ್ಡಾಯ ಮಾಡಿದೆ.
ಗಾಜಾದಲ್ಲಿ ಕಂಡಲೆಲ್ಲಾ ಶವಗಳ ರಾಶಿ, ಐಸ್ ಕ್ರೀಮ್ ಟ್ರಕ್‌ಗಳಲ್ಲಿ ಮೃತದೇಹಗಳ ಸಾಗಾಟ!
ಈ ಬಾಂಬ್ ಶೆಲ್ಟರ್‌ಗಳು ಎಷ್ಟು ಬಲಿಷ್ಠವಾಗಿದೆಯೆಂದರೆ, ಈ ಬಾಗಿಲ ಹೊರಗಡೆಯೇ ಬಾಂಬ್ ಬಿದ್ದರೂ ಒಳಗಡೆ ಇರುವವರೆಗೆ ಯಾವುದೇ ಹಾನಿಯಾಗೋದಿಲ್ಲ. ಬೆಂಕಿ ನಂದಿಸೋಕೆ ಕೂಡ ಶೆಲ್ಟರ್‌ನಲ್ಲಿ ವ್ಯವಸ್ಥೆ ಇರುತ್ತದೆ.