Jul 13, 2022, 8:38 PM IST
ಕೊಲಂಬೋ (ಜುಲೈ 13): ಪುಟ್ಟ, ಸುಂದರ ದೇಶ ಶ್ರೀಲಂಕಾ ಅಕ್ಷರಶಃ ನರಕವಾಗಿದೆ. ಜನರ ಕಷ್ಟಗಳಿಗೆ ಸ್ಪಂದಿಸದ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿರುವ ದೇಶದ ಜನತೆ ಈಗಾಗಲೇ ಅಧ್ಯಕ್ಷರ ಭವನಕ್ಕೆ ಮುತ್ತಿಗೆ ಹಾಕಿದ್ದಾರೆ. ಲಂಕಾದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಏಷ್ಯಾನೆಟ್ ನ್ಯೂಸ್ ಗ್ರೌಂಡ್ ರಿಪೋರ್ಟ್ ಮಾಡಿದ್ದು, ಜನರು ತಮ್ಮ ಆಕ್ರೋಶಗಳನ್ನು ಹೊರಹಾಕಿದ್ದಾರೆ.
ನಮ್ಮ ದೇಶದ ಪರಿಸ್ಥಿತಿ ಬಹಳ ಕೆಟ್ಟದಾಗಿದೆ. ಮುಂದೇನಾಗುತ್ತದೆ ಎನ್ನುವುದು ನಮಗೂ ತಿಳಿದಿಲ್ಲ ಎಂದು ರಾಷ್ಟ್ರಪತಿ ಭವನದಲ್ಲಿಯೇ ಇದ್ದ ಪ್ರತಿಭಟನಾಕಾರನೊಬ್ಬ ಪ್ರತಿಕ್ರಿಯೆ ನೀಡಿದ್ದಾನೆ. ಈ ಸರ್ಕಾರ ನೀವು ನಿರೀಕ್ಷೆಯೇ ಮಾಡದಷ್ಟು ಕೆಟ್ಟದಾಗಿದೆ. ನಮ್ಮ ಜನರ ಕಷ್ಟಗಳಿಗೆ ಇವರು ಯಾರು ಸ್ಪಂದಿಸಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: Sri Lanka Crisis: ಗೋಟಬಯ ರಾಜಪಕ್ಸ ರಾಜೀನಾಮೆ ನೀಡದಿದ್ದರೆ ಸಂಸತ್ತು ವಶಕ್ಕೆ; ಪ್ರತಿಟಭನಾಕಾರರ ಬೆದರಿಕೆ
ಶ್ರೀಲಂಕಾದ ಅಧ್ಯಕ್ಷರ (Sri Lanka president) ಭವನದ ಶ್ರೀಮಂತಿಕೆಯನ್ನು ಕಣ್ತುಂಬಿಕೊಳ್ಳಲು ದೇಶದ ಜನರು ರಾತ್ರಿಯಿಡೀ ಸರತಿ ಸಾಲಿನಲ್ಲಿ ನಿಂತು ಹೋಗುತ್ತಿದ್ದಾರೆ. ಅಧ್ಯಕ್ಷರ ಈಜುಕೊಳ, ಬೆಡ್ ರೂಮ್, ಮೆತ್ತನೆಯ ಹಾಸಿಗೆಯ ಮೇಲೆ ನಿದ್ರೆ ಮಾಡಿ ವೈಭೋಗವನ್ನು ಅನುಭವಿಸುವ ಪ್ರಯತ್ನವನ್ನೂ ಮಾಡಿರುವ ವಿಡಿಯೋಗಳು ವೈರಲ್ ಆಗಿದೆ. ವೃದ್ಧರು ಮಕ್ಕಳೆನ್ನದೆ ಎಲ್ಲರೂ ಕೂಡ ರಾಷ್ಟ್ರಪತಿ ಭವನದ ದರ್ಶನ ಪಡೆದುಕೊಂಡಿದ್ದಾರೆ.