ಅಮೆರಿಕಾ- ಚೀನಾ ನಡುವಿನ ರಾಜತಾಂತ್ರಿಕ ಸಮರ ತಾರಕಕ್ಕೆ; ಸುಳಿವು ನೀಡಿದ ಟ್ರಂಪ್

Aug 3, 2020, 6:10 PM IST

ವಾಷಿಂಗ್‌ಟನ್ (ಆ. 03): ಅಮೆರಿಕ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಸಮರ ಇನ್ನಷ್ಟುತಾಕಕ್ಕೇರುವ ಸುಳಿವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿದ್ದಾರೆ. ಬುಧವಾರವಷ್ಟೇ ಹೂಸ್ಟನ್‌ನಲ್ಲಿ ಚೀನಾ ರಾಯಭಾರ ಕಚೇರಿ ಮುಚ್ಚಲು ಆದೇಶಿಸಿದ್ದ ಅಮೆರಿಕ ಇದೀಗ, ಅಗತ್ಯವಿದ್ದರೆ ಇನ್ನಷ್ಟುರಾಯಭಾರ ಕಚೇರಿ ಮುಚ್ಚಿಸುವ ಸಾಧ್ಯತೆ ಇದೆ ಎಂದು ಹೇಳಿದೆ.

ಈ ಕುರಿತು ಹೇಳಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಟ್ರಂಪ್‌, ಸಂಶೋಧನೆಯ ಅಂತಿಮ ಹಂತದಲ್ಲಿರುವ ಕೊರೋನಾ ಸೋಂಕಿನ ಲಸಿಕೆಗೆ ಸಂಬಂಧಿಸಿದ ಮಾಹಿತಿಗಳನ್ನು ಹಾಗೂ ದೇಶದ ಬೌದ್ಧಿಕ ಆಸ್ತಿಯನ್ನು ಚೀನಾದ ಹ್ಯಾಕರ್‌ಗಳಿಂದ ಕಾಪಾಡಿಕೊಳ್ಳಬೇಕಿರುವ ಹಿನ್ನೆಲೆಯಲ್ಲಿ ರಾಜತಾಂತ್ರಿಕ ಕಚೇರಿಗಳನ್ನು ಮುಚ್ಚಿಸಬೇಕಾದ ಸಾಧ್ಯತೆ ಎದುರಾಗಬಹುದು ಎಂದಿದ್ದಾರೆ.

TikTok ಖರೀದಿಗೆ ಮೈಕ್ರೋಸಾಫ್ಟ್‌ ಯತ್ನ, ಬ್ಯಾನ್ ಮಾಡ್ತೀನಿ ಖರೀದಿಗೆ ಬಿಡಲ್ಲ ಎಂದ ಟ್ರಂಪ್