ಇಸ್ರೇಲ್ ವಿರುದ್ಧ ಮರುಕಳಿಸುತ್ತಾ 1948ರ ಅರಬ್ ಯುದ್ಧ..? ತೈಲ ನಿರ್ಬಂಧ ಹೇರುವಂತೆ ಇರಾನ್ ಒತ್ತಾಯ..!

Oct 19, 2023, 2:45 PM IST

ಯುದ್ಧ ಭೂಮಿಯಲ್ಲಿ ಸುವರ್ಣ ಸಂಚಾರ ನಿರಂತರವಾಗಿ ಸಾಗಿದೆ. ಇಸ್ರೇಲ್(Isreal)  ನೆಲದಲ್ಲಿ ನಮ್ಮ ಓಡಾಟ ಮುಗಿದ ಬಳಿಕ ಈಗ ಹಮಾಸ್(Hamas) ಉಗ್ರ ಸ್ವರ್ಗ ಪ್ಯಾಲೆಸ್ತೈನ್(Palestine) ಕಡೆ ಸಾಗಿದೆ. ಇಸ್ರೇಲ್ ಕಡೆಯಿಂದ ಪ್ಯಾಲೆಸ್ತೇನ್ ನೋಡಿದ ಬಳಿಕ ಆ ಜಾಗದಲ್ಲಿ ನಿಂತು ಇಸ್ರೇಲ್ ದೇಶವನ್ನ ನೋಡೋಕೆ ಸುವರ್ಣ ನ್ಯೂಸ್ ಹೋಗಿದೆ. ಪ್ಲೆಲೆಸ್ತೇನ್‌ನನ್ನ ರಾಮ್ಲಾದಲ್ಲಿ ಅಜಿತ್ ಹನಮಕ್ಕನವರ್ ಸುತ್ತಾಟ ಶುರು ಮಾಡಿದ್ದಾರೆ. ನಿಜಕ್ಕೂ ಇದೊಂದು ಅದ್ಭುತ ಪ್ರಯಾಣ. ಇಸ್ರೇಲ್ ಕೆಂಗಣ್ಣಿಗೆ ಗುರಿಯಾಗಿರುವ ದೇಶದ ಮೇಲೆ ಎನಿ ಟೈಮ್ ಅಟ್ಯಾಕ್ ಆಗಬಹುದು. ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ಭೀಕರ ನರಮೇಧಕ್ಕೆ ಪ್ರತಿಯಾಗಿ ದಾಳಿ ನಡೆಯುತ್ತಿದೆ. ಗಾಜಾದಲ್ಲಿರುವ ಹಮಾಸ್ ಉಗ್ರರ ಅಡಗುತಾಣಗಳ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ಆದರೆ ಯಹೂದಿ ದೇಶವಾಗಿರುವ ಇಸ್ರೇಲ್ ಮುಸ್ಲಿಮರ(Muslim) ಮೇಲೆ ನರಮೇಧ ನಡೆಸುತ್ತಿದೆ ಎಂದು ಆರೋಪಿಸಿ ಹಲವರು ಪ್ಯಾಲೆಸ್ತಿನ್‍ಗೆ ಬೆಂಬಲ ನೀಡುತ್ತಿದ್ದಾರೆ. ಈ ಪೈಕಿ ಪಾಕಿಸ್ತಾನ ಕೂಡ ಹಿಂದೆ ಬಿದ್ದಿಲ್ಲ. ಇಂದು ಪಾಕಿಸ್ತಾನದ ಸಂಸತ್ತಿನಲ್ಲಿ ಎಚ್ಚರಿಕೆ ಗಂಟೆಗಳು ಮೊಳಗಿದೆ. ಪಾಕಿಸ್ತಾನದ(Pakisthan) ಮಹಿಳಾ ಸಂಸದೆ, ಮಾಜಿ ಪ್ರಧಾನಿ ನವಾಜ್ ಷರೀಫ್ ಸೊಸೆ ಆಡಿದ ಮಾತುಗಳು ಭಾರಿ ವೈರಲ್ ಆಗಿದೆ. ಪಾಕಿಸ್ತಾನದಲ್ಲಿರುವ ನ್ಯೂಕ್ಲಿಯರ್ ಬಾಂಬ್ ಸುಮ್ಮನೆ ನೋಡಲು ಇಟ್ಟಿಲ್ಲ. ಅದು ಪಾಕಿಸ್ತಾನ ಹಾಗೂ ಮುಸ್ಲಿಮರ ರಕ್ಷಣೆಗಾಗಿ ಇಡಲಾಗಿದೆ. ಇಸ್ರೇಲ್ ದಾಳಿ ಮುಂದುವರಿಸಿದರೆ ನ್ಯೂಕ್ಲಿಯರ್ ಬಾಂಬ್ ಬಳಸಿ ವಿಶ್ವ ಭೂಪಟದಿಂದ ಇಸ್ರೇಲ್ ಮಾಯ ಮಾಡುತ್ತೇವೆ ಎಂದು ಗುಡುಗಿದ್ದಾರೆ.

ಇದನ್ನೂ ವೀಕ್ಷಿಸಿ:  ಪ್ರೀತಿಸಿ ಮದುವೆಯಾದವಳ ಕತ್ತು ಸೀಳಿದ ಗಂಡ: ಅವಳ ಕೊಲೆಗೆ ಕಾರಣ ಅವಳದ್ದೇ ಲವ್ ಸ್ಟೋರಿಗಳು..!