Aug 21, 2021, 12:16 PM IST
ಕಾಬೂಲ್(ಆ.21): ತಾಲಿಬಾನಿಗಳನ್ನು ಸೋಲಿಸಲು ಅಮೆರಿಕ ಅಷ್ಘಾನಿಸ್ತಾನ ಸೇನೆಗೆ ನೀಡಿದ್ದ ಆಧುನಿಕ ಶಸ್ತ್ರಾಸ್ತ್ರಗಳು ಈಗ ತಾಲಿಬಾನಿಗಳ ವಶವಾಗಿದೆ. ಅಮೆರಿಕ ನೀಡಿದ್ದ 2000 ಸಶಸ್ತ್ರ ವಾಹನಗಳು, 40 ಹೆಲಿಕಾಪ್ಟರ್‌ಗಳು, ಸ್ಫೋಟಕಗಳು, ಆಧುನಿಕ ಮಶಿನ್ ಗನ್‌ಗಳನ್ನು ತಾಲಿಬಾನ್ ವಶಪಡಿಸಿಕೊಂಡಿದೆ. ಹೀಗಾಗಿ ಕಳೆದ ಬಾರಿಗಿಂತ ತಾಲಿಬಾನಿಗಳು ಈ ಬಾರಿ ಹೆಚ್ಚು ಹಾನಿ ಮಾಡಬಲ್ಲ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ಮತ್ತಷ್ಟು ಅಪಾಯಕಾರಿಯಾಗಿ ಹೊರಹೊಮ್ಮವು ಭೀತಿ ಎದುರಾಗಿದೆ.
2003-2016ರ ಅವಧಿಯಲ್ಲಿ ಅಮೆರಿಕ ಅಷ್ಘಾನಿಸ್ತಾನಕ್ಕೆ 208 ಯುದ್ಧ ವಿಮಾನಗಳನ್ನು ನೀಡಿದೆ. ಆಫ್ಘನ್ ಸೇನೆ ತಾಲಿಬಾನಿಗಳಿಗೆ ಶರಣಾಗುವ ಮೂಲಕ 2 ಸಾವಿರಕ್ಕೂ ಹೆಚ್ಚು ಮಿಲಿಟರಿ ವಾಹನಗಳು ತಾಲಿಬಾನಿಗಳಿಗೆ ಸುಲಭವಾಗಿ ದೊರಕಿದೆ. ಇದರಲ್ಲಿ ಯುಎಚ್-60 ಬ್ಲಾಕ್ ಹಾಕ್ಸ್, ಎ-29 ಸೂಪರ್ ಟ್ಯುಕಾನೋ ಸೇರಿದಂತೆ ಸುಸಜ್ಜಿತವಾದ 40 ಯುದ್ಧ ವಿಮಾನಗಳು ಹಾಗೂ ಸ್ಕಾ್ಯನ್ ಈಗಲ್ ಮಿಲಿಟರಿ ಡ್ರೋನ್‌ಗಳು ಸೇರಿವೆ.