Russia Ukraine War: 100 ದಿನದ ಮಹಾಯುದ್ಧ ಗೆದ್ದಿದ್ಯಾರು? ಸೋತಿದ್ಯಾರು?

Russia Ukraine War: 100 ದಿನದ ಮಹಾಯುದ್ಧ ಗೆದ್ದಿದ್ಯಾರು? ಸೋತಿದ್ಯಾರು?

Published : Jun 05, 2022, 07:47 PM IST

ರಷ್ಯಾ, ಉಕ್ರೇನ್ ಮೇಲೆ ಸಮರ ಸಾರಿ 100 ದಿನಗಳೇ ಕಳೆದು ಹೋಗಿದೆ. ಯುದ್ಧದ ಸಮಯದಲ್ಲಿ, ಈ 100 ದಿನದ ಯುದ್ಧದಲ್ಲಿ ರಷ್ಯಾ ಇಡೀ ಉಕ್ರೇನ್​ನ ಚಿತ್ರಣವನ್ನೇ ಕಂಪ್ಲಿಟ್​ ಆಗಿ ಬದಲಾಯಿಸಿದೆ. 

ನವದೆಹಲಿ (ಜೂ. 05): ರಷ್ಯಾ, ಉಕ್ರೇನ್ (Russia Ukraine War) ಮೇಲೆ ಸಮರ ಸಾರಿ 100 ದಿನಗಳೇ ಕಳೆದು ಹೋಗಿದೆ. ಯುದ್ಧದ ಸಮಯದಲ್ಲಿ, ಈ 100 ದಿನದ ಯುದ್ಧದಲ್ಲಿ ರಷ್ಯಾ ಇಡೀ ಉಕ್ರೇನ್​ನ ಚಿತ್ರಣವನ್ನೇ ಕಂಪ್ಲಿಟ್​ ಆಗಿ ಬದಲಾಯಿಸಿದೆ. ಈಗ ಉಕ್ರೇನ್​ನಲ್ಲಿ ಕಣ್ಣಾಡಿಸಿದ್ದಲ್ಲೆಲ್ಲ ಸುಟ್ಟು ಬೂದಿಯಾಗಿ ಬಿದ್ದಿರೋ ಕಟ್ಟಡಗಳು, ಸ್ಮಶಾನದಂತೆ ಬಣಗುಡ್ತಿರೋ ಊರು ಹಳ್ಳಿಗಳು ಮಾತ್ರ ಕಾಣಿಸುತ್ತಿವೆ. ಈ ಮಹಾಯುದ್ಧ ಎಲ್ಲರೂ ಅಂದುಕೊಂಡಿದ್ದಕ್ಕಿಂತಲೂ ಹೆಚ್ಚೇ ಘನಘೋರವಾಗಿ ನಡೆದಿತ್ತು. ಅಮಾಯಕರ ಕಿರಿಚಾಟ, ಒದ್ದಾಟ, ನರಳಾಟ.. ಅಬ್ಬಬ್ಬಾ ಒಂದಾ ಎರಡಾ.? ನರಕ, ಅಕ್ಷರಶಃ ನರಕದ ಚಿತ್ರಣವೇ ಇಲ್ಲಿ ಸೃಷ್ಟಿಯಾಗಿ ಹೋಗಿತ್ತು. ಆದರೂ ಕಲ್ಲು ಹೃದಯಿ ಪುಟಿನ್​ ಮಾತ್ರ ಎಲ್ಲವನ್ನೂ ಸೈಲೆಂಟಾಗಿ ಕೂತು ನೋಡ್ತಿದ್ದನೇ ವಿನಃ ಯುದ್ಧ ನಿಲ್ಲಿಸಿ ಅಂತ ಒಂದೇ ಒಂದು ಮಾತನ್ನ ಹೇಳಿರ್ಲಿಲ್ಲ. 

ಇದನ್ನೂ ನೋಡಿ:  ಪುಟಿನ್ ಸಾವಿನ ಬಗ್ಗೆ ಉದ್ಭವವಾಗಿರೋ ರಹಸ್ಯಗಳೇನು? ಜಗತ್ತಿನ ಮುಂದೆ ಇಟ್ಟ MI6 ಏಜೆಂಟ್

ಹಾಗಂತ ಉಕ್ರೇನ್​ ಏನೂ ರಷ್ಯಾ ಪವರ್ ಮುಂದೆ ತಲೆತಗ್ಗಿಸಿಕೊಂಡು ಕೂತಿರ್ಲಿಲ್ಲ. ಅದು ಕೂಡಾ ಪಕ್ಕಾ ಟಕ್ಕರ್​ ಕೊಟ್ಟಿತ್ತು. ಉಕ್ರೇನ್​ ನೋಡೋದಕ್ಕೆ ಗುಬ್ಬಿಗಾತ್ರದ ರಾಷ್ಟ್ರವಾಗಿದ್ದರೂ ರಷ್ಯಾ ಮುಂದೆ ತೊಡೆತಟ್ಟಿಕೊಂಡು ನಿಂತು ಹೋರಾಡಿತ್ತು. ಇದಕ್ಕೆ ಉಕ್ರೇನ್​ ಜನರು ಕೂಡಾ ಸಾಥ್​ ಕೊಟ್ಟರು. ನಮ್ಮ ದೇಶ, ನಮ್ಮ ನೆಲ ಅಂತ ಹೋರಾಡಿದ್ದರ ಪರಿಣಾಮವೇ 100 ದಿನವಾದರೂ ಈ ಯುದ್ಧ ಗೆಲ್ಲೊದಕ್ಕಾಗದೇ ರಷ್ಯಾ ಹೆಣಗಾಡ್ತಿದೆ. ಈ ಕುರಿತ ಒಂದು ಕಂಪ್ಲೀಟ್‌ ವರದಿ ಇಲ್ಲಿದೆ. 

98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
44:18ಡೊನಾಲ್ಡ್ ಟ್ರಂಪ್ ಶಾಂತಿ ಸೂತ್ರ: ಇಸ್ರೇಲ್-ಗಾಜಾ ಯುದ್ಧಕ್ಕೆ ಬೀಳುತ್ತಾ ತೆರೆ?
22:58ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ: ಹೆಂಡತಿ ಮಗನ ಕಣ್ಣೆದುರೇ ನಡೆಯಿತು ಘೋರ ಕೃತ್ಯ!
18:07ಕೊಲೆಗಡುಕರ ಟಾರ್ಗೆಟ್ ಆಗಿದ್ದೇಕೆ ಟ್ರಂಪ್ ಆಪ್ತ? ಅಮೆರಿಕಾದ ಪ್ರಭಾವಿಯ ಹತ್ಯೆಗೂ ಮುನ್ನ ಆಗಿದ್ದೇನು?
19:06ಕಿಮ್ ಕುಟುಂಬವೇ ರಹಸ್ಯಗಳ ಗೂಡು, ನಿಗೂಢ ರಹಸ್ಯ ಭೇದಿಸಿದಾಗ ಬಯಲಾಗಿದ್ದೇನು?
Read more