ವಾಟ್ಸಾಪ್ ಹೊಸ ನಿಯಮ, ಒಪ್ಪದಿದ್ರೆ App ಬ್ಲಾಕ್!

ವಾಟ್ಸಾಪ್ ಹೊಸ ನಿಯಮ, ಒಪ್ಪದಿದ್ರೆ App ಬ್ಲಾಕ್!

Published : Mar 11, 2021, 05:44 PM ISTUpdated : Mar 12, 2021, 07:33 AM IST

ಹೊಸ ನಿಯಮ ಒಪ್ಪದಿದ್ದರೆ, ನಿಮ್ಮ ವಾಟ್ಸಾಪ್ ಕಾರ್ಯ ನಿರ್ವಹಿಸುವುದಿಲ್ಲ. ಡಿಜಿಟಲ್ ದುನಿಯಾ ದಿಗ್ಗಜನ ಈ ನೂತನ ನಿಯಮ ಭಯ ಹುಟ್ಟಿಸಿದ್ದೇಕೆ? ಪ್ರೈವೆಸಿ ಪಾಲಿಸಿ ಒಪ್ಪಿಕೊಂಡರೆ ತಾನೇ ತಾನಾಗಿ ಡಿಲೀಟ್ ಆಗ್ತವಾ ನಿಗೂಢ ಸಂದೇಶಗಳು? 

ನವದೆಹಲಿ(ಮಾ.11): ಹೊಸ ನಿಯಮ ಒಪ್ಪದಿದ್ದರೆ, ನಿಮ್ಮ ವಾಟ್ಸಾಪ್ ಕಾರ್ಯ ನಿರ್ವಹಿಸುವುದಿಲ್ಲ. ಡಿಜಿಟಲ್ ದುನಿಯಾ ದಿಗ್ಗಜನ ಈ ನೂತನ ನಿಯಮ ಭಯ ಹುಟ್ಟಿಸಿದ್ದೇಕೆ? ಪ್ರೈವೇಸಿ ಪಾಲಿಸಿ ಒಪ್ಪಿಕೊಂಡರೆ ತಾನೇ ತಾನಾಗಿ ಡಿಲೀಟ್ ಆಗ್ತವಾ ನಿಗೂಢ ಸಂದೇಶಗಳು? 

ಬಳಕೆದಾರರ ಮಾಹಿತಿ ಸಂಗ್ರಹ ಮತ್ತು ಅದನ್ನು ಇತರರ ಜೊತೆ ಹಂಚಿಕೊಳ್ಳುವ ಕುರಿತ ತನ್ನ ಹೊಸ ನೀತಿಯ ಕುರಿತು ವಾಟ್ಸಾಪ್‌ ಸಂಸ್ಥೆ ಮತ್ತೆ ಗ್ರಾಹಕರಿಗೆ ಸಂದೇಶ ರವಾನಿಸಲು ಆರಂಭಿಸಿದೆ. ಒಂದು ವೇಳೆ ಗ್ರಾಹಕರು ಈ ಹೊಸ ಖಾಸಗಿ ನೀತಿ ಒಪ್ಪದೇ ಹೋದಲ್ಲಿ ಮೇ 15ರಿಂದ ಮೊಬೈಲ್‌ನಲ್ಲಿ ವಾಟ್ಸಾಪ್‌ ಸೇವೆಗಳು ಸ್ಥಗಿತಗೊಳ್ಳಲಿದೆ ಎಂದು ಅದು ಮಾಹಿತಿ ನೀಡಿದೆ.

ಮತ್ತೆ ಕ್ಯಾತೆ: ಹೊಸ ನೀತಿ ಒಪ್ಪದಿದ್ದರೆ ಮೇ.15ರಿಂದ ವಾಟ್ಸಾಪ್‌ ‘ಬಂದ್‌’!

ಬಳಕೆದಾರರ ಮಾಹಿತಿಯನ್ನು, ತನ್ನ ಇತರೆ ಜಾಲತಾಣಗಳಿಗೆ ಮತ್ತು ಉದ್ಯಮಗಳ ಜೊತೆ ಹಂಚಿಕೊಳ್ಳುವ ಹೊಸ ನೀತಿಯೊಂದರ ಜಾರಿಗೆ ವಾಟ್ಸಾಪ್‌ನ ಮಾತೃಸಂಸ್ಥೆ ಫೇಸ್‌ಬುಕ್‌ ಮುಂದಾಗಿದೆ. ಫೆ.8ರಿಂದಲೇ ಈ ನೀತಿ ಜಾರಿಯಾಗಬೇಕಿತ್ತಾದರೂ, ಬಳಕೆದಾರರ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ಅದು ನೀತಿ ಜಾರಿಯನ್ನು ಮೇ 15ಕ್ಕೆ ಮುಂದೂಡಿತ್ತು. ಇದೀಗ ಆ ಗಡುವು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಾಟ್ಸಾಪ್‌ ಸಂಸ್ಥೆಯು ನೇರವಾಗಿ ಬಳಕೆದಾರರ ಮೊಬೈಲ್‌ಗಳಿಗೆ ಮತ್ತು ಟ್ವೀಟರ್‌ ಮೂಲಕ ಮಾಹಿತಿ ರವಾನಿಸುವ ಮೂಲಕ, ಗಡುವು ಸಮೀಪಿಸುತ್ತಿರುವ ಕುರಿತು ಜ್ಞಾಪಕ ಮಾಡುವ ಕೆಲಸ ಮಾಡಿದೆ.

08:41ವ್ಯಾಟ್ಸಾಪ್‌ನಲ್ಲಿ APK ಫಾರ್ಮ್ಯಾಟ್‌ನಲ್ಲಿ ಹೊಸ ವರ್ಷ ಶುಭಾಶಯ ಬಂದರೆ ಡೌನ್ಲೋಡ್ ಮಾಡಬೇಡಿ!
19:29AI ಟೆಕ್ನಾಲಜಿಯ ಕರಾಳ ಮುಖ, ಚಾಟ್ಬಾಟ್ ಮಾತು ಕೇಳಿ ಹೆತ್ತವರನ್ನೇ ಕೊಂದ ಯುವಕ!
01:41ರಿಯಲ್‌ ಮೀ ನಾರ್ಜೋ ಸಿರೀಸ್‌ನ ಹೊಸ ಫೋನ್‌ ಲಾಂಚ್‌
08:26ಅಸ್ಟ್ರೋಟೈಮ್: ಕ್ಲಾಕ್ ಇಂಡಸ್ಟ್ರಿಯಲ್ಲಿ ಹೊಸ ಆವಿಷ್ಕಾರ, ಎಲ್ಲರ ಗಮನ ಸೆಳೆಯುತ್ತಿದೆ ಪಂಚಾಂಗ ಗಡಿಯಾರ!
03:205G in India : ಹೇಗಿರಲಿದೆ 5ಜಿ ದುನಿಯಾ? ಕಾರ್ಯನಿರ್ವಹಣೆ ಹೇಗೆ?
18:375G Internet in India: ಮೋದಿ ಯುಗದ ಮತ್ತೊಂದು ಮೈಲುಗಲ್ಲು: ಹೇಗಿರಲಿದೆ ಡಿಜಿಟಲ್ ಭವಿಷ್ಯ?
18:31Tasty TV : ಇದೇನಪ್ಪಾ ಅಚ್ಚರಿ, ಟಿವಿ ನೆಕ್ಕಿ ಆಹಾರದ ಸವಿ ನೋಡಬಹುದು!
18:15ಮನುಕುಲಕ್ಕೆ ಮಾರಕವಾದ ಭಯಾನಕ ಪ್ರಯೋಗಕ್ಕೆ ಮುಂದಾದ ಚೀನಾ
17:255G Network ಅನುಕೂಲಕ್ಕಿಂತ ಅಪಾಯವೇ ಹೆಚ್ಚು, ಮನುಷ್ಯ ಸಂಕುಲಕ್ಕೆ ಕಂಟಕ!
15:26Bengaluru Tech Summit:ಯಶಸ್ವಿಯಾಯ್ತು ಟೆಕ್ ಸಮ್ಮಿಟ್, ರಾಜ್ಯಕ್ಕೆ ಹರಿದು ಬಂತು ಸಾವಿರಾರು ಕೋಟಿ!