ಕೊಡಗಿಗೆ ಮಾರಕವಾಗ್ತಾ ಇದೆ ಪ್ರವಾಸಿಗರ 'ಗಲೀಜು' ವರ್ತನೆ

Apr 18, 2022, 12:58 PM IST

ಈ ದೃಶ್ಯದಲ್ಲಿ ಕಾಣುತ್ತಿರುವುದು ಮಡಿಕೇರಿ(Madikeri)- ಮೈಸೂರು ರಾಷ್ಟ್ರೀಯ ಹೆದ್ದಾರಿ 275. ಈ ತಿರುವು ತುಂಬಿರುವ ರಸ್ತೆಯಲ್ಲಿ ಸಾಗುವ ಮಜವೇ ಬೇರೆ. ಯಾಕೆಂದರೆ, ರಸ್ತೆಯ ಎರಡೂ ಬದಿಗಳಲ್ಲಿ ಹಚ್ಚ ಹಸಿರ ಪರಿಸರ. ಸುಂದರ ಕಾಫಿ ತೋಟಗಳು... ಬೆಟ್ಟಗುಡ್ಡಗಳು.... ಇಂತಹ ಸುಂದರ ಪರಿಸರವನ್ನ ಆಸ್ವಾದಿಸುತ್ತಾ ರಸ್ತೆಯಲ್ಲಿ ಸಾಗುವುದೇ ಖುಷಿ. ಆದ್ರೆ, ಇಷ್ಟು ಸುಂದರವಾಗಿರೋ ಇದೇ ರಸ್ತೆಯ ಬದಿಯನ್ನ ಕೂಡ ಒಮ್ಮೆ ನೋಡಿ... ಎಲ್ಲಿ ನೋಡಿದರೂ ಕಸದ ರಾಶಿ...ಹಚ್ಚ ಹಸಿರನ್ನೇ ಮುಚ್ಚಿಡುವಷ್ಟು ತ್ಯಾಜ್ಯಗಳು... ತಿಂಡಿಯ ಪ್ಯಾಕೆಟ್ ಗಳು... ಪ್ಲಾಸ್ಟಿಕ್ ಬಾಟಲಿಗಳು, ಮದ್ಯದ ಬಾಟಲಿಗಳು ಕಂಡಕಂಡಲ್ಲಿ ಬರೇ ಕಸ ಕಸ ಕಸ...  ಇಂತಹ ಸುಂದರ ಪರಿಸರದಲ್ಲಿ ಹೀಗೆ ಕಸ ಎಸೆಯಲು ನಮ್ ಜನರಿಗೆ  ಅದ್ಹೇಗೆ ಮನಸ್ಸು ಬರುತ್ತೋ ಗೊತ್ತಿಲ್ಲ.  ಆದ್ರೆ, ನೀವ್ ನಂಬಲೇಬೇಕು ಇಂತಹ ದುರಂತ ಸ್ಥಿತಿಗೆ ಕಾರಣ  ಈ ರಸ್ತೆಯ ಮೇಲೆ ಓಡಾಡೋ ಪ್ರವಾಸಿಗರೇ(Tourists) ಅನ್ನೋದು. ಹೌದು, ಈ ಹೈವೇಯ ಎರಡೂ ಬದಿಯಲ್ಲಿ ಕಾಣುವುದು ನೀರು, ಜ್ಯೂಸು, ಹೆಂಡ ಕುಡಿದು ಬಿಸಾಡಿದ ಬಾಟಲಿಗಳು ಮಾತ್ರ. ಸ್ಥಳೀಯರು ತಮ್ಮೂರಿನ ಪರಿಸರವನ್ನು ಉಳಿಸಲು ಅದೆಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗುತ್ತಿಲ್ಲ.  ಹೀಗಾಗಿ ಈ ದುಸ್ಥಿತಿಯನ್ನ ನೋಡಿ ಇಲ್ಲಿನ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. 

ಜಿಲ್ಲೆಯ ಪರಿಸರ ಹಾಳಾಗುವುದನ್ನ ತಡೆಯೋಕೆ ಕೆಲವು ಸಂಘ ಸಂಸ್ಥೆಗಳು ಸಾಕಷ್ಟು ಶ್ರಮ ವಹಿಸುತ್ತಿದೆ. ಹಾಗೆ ನೋಡಿದ್ರೆ ಪ್ರವಾಸಿಗರು ಮಾತ್ರವಲ್ಲ ಸ್ಥಳೀಯರು ಕೂಡ ಈ ಹಿಂದೆ ಪರಿಸರ ಹಾಳುಮಾಡುವುದನ್ನ ಪತ್ತೆಹಚ್ಚಿದ್ದಾರೆ. ಕೆಲವರು ತಮ್ಮ ಮನೆ, ಮಳಿಗೆಗಳ ರಾಶಿ ರಾಶಿ ಕಸಗಳನ್ನು ತಂದು ರಾತ್ರೋ ರಾತ್ರಿ ರಸ್ತೆ ಬದಿ ಎಸೆದು ಸ್ವಲ್ಪವೂ ಮುಜುಗರವಿಲ್ಲದೇ ಪರಾರಿಯಾಗುತ್ತಾರೆ. ಹೀಗಾಗಿ, ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಟಾಸ್ಕ್​ ಫೋರ್ಸ್​ ರಚನೆ ಮಾಡಿ ಹೀಗೆ ಕಸ ಎಸೆಯುವವರ ವಿರುದ್ಧ ದಂಡ ಹಾಕುವಂತೆ ಒತ್ತಾಯ ಕೇಳಿ ಬಂದಿದೆ. ಇನ್ನು, ಪ್ರವಾಸಿಗರ ವರ್ತನೆಯಿಂದ ಸ್ವತಃ ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಜಿಲ್ಲೆಗೆ ಪ್ರವಾಸ ಬರುವವರು ಸ್ವಲ್ಪವಾದ್ರೂ ಜವಾಬ್ದಾರಿಯಿಂದ ವರ್ತಿಸಿ ಅಂತ ಕರೆ ಕೊಟ್ಟಿದ್ದಾರೆ.  

Beauty Tips: ಬೇಸಿಗೆಯಲ್ಲಿ ಕಪ್ಪು ದ್ರಾಕ್ಷಿಯ ಈ ಫೇಸ್ ಪ್ಯಾಕ್ ಹಚ್ಚಿ ಸಖತ್ತಾಗಿ ಮಿಂಚಿ

ಅದೇನೇ ಇರಲಿ, ಕೊಡಗು ಜಿಲ್ಲೆಯ ಪರಿಸರ ಎಂಜಾಯ್ ಮಾಡಲು ಹೋಗುವ ಪ್ರವಾಸಿಗರೆ ಇನ್ನಾದ್ರೂ ಎಚ್ಚೆತ್ತುಕೊಳ್ಳುವುದು ಒಳಿತು. ಇಲ್ಲಿನ ಪ್ರಕೃತಿಯ ಸೊಬಗನ್ನು ಕಂಡು ಖುಷಿ ಪಡುವುವರು ಅದನ್ನ ಗೌರವಿಸುವುದನ್ನೂ ಕಲಿಯಿರಿ ಎಂಬುದು ಇಲ್ಲಿನ ಸ್ಥಳೀಯರ ಆಗ್ರಹವಾಗಿದೆ