ಕರ್ನಾಟಕದ ಏಳು ಅದ್ಭುತಗಳ ಪಟ್ಟಿಯಲ್ಲಿ ಶ್ರವಣಬೆಳಗೊಳದ ಗೊಮ್ಮಟೇಶ್ವರ...

Mar 20, 2023, 12:21 PM IST

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿರು ಜೈನ ತೀರ್ಥಕ್ಷೇತ್ರ  ಶ್ರವಣಬೆಳಗೊಳದ ಗೊಮ್ಮಟೇಶ್ವರ ಸದ್ಯ ಕರ್ನಾಟಕದ ಏಳು ಅದ್ಭುತಗಳಲ್ಲಿ ಒಂದು ಎಂದು ಅಧಿಕೃತ ಮಾನ್ಯತೆ ಹೊಂದಿದೆ. ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು. ಶ್ರವಣಬೆಳಗೊಳ ಎಂದಾಗ ಎರಡು ಶಬ್ದ ಬರುತ್ತದೆ  ಶ್ರವಣ ಮತ್ತು ಬೆಳಗೊಳ, ಜೈನ ಸನ್ಯಾಸಿ ಮುನಿಗಳಿಗೆ  ಶ್ರವಣ ಎನ್ನುತ್ತಾರೆ . ಇನ್ನು ಬಿಳಿಯ ಕೊಳದಿಂದ ಬೆಳಗೊಳ ಎಂದು ಬಂತು ಎಂಬ ಇತಿಹಾಸವು ಇದೆ.  ಪ್ರಸಿದ್ಧವಾದ ಈ   ಶ್ರವಣಬೆಳಗೊಳ ಭೂ ಮಟ್ಟದಿಂದ 438 ಅಡಿ ಎತ್ತರದ ಶೀಲಾ ಬೆಟ್ಟದ ಮೇಲೆ ಕ್ರ.ಶ 981ರ ಸಮಾರಿಗೆ ಚಾವುಂಡರಾಯನಿಂದ ಕೆತ್ತಿಸಲ್ಪಟ್ಟಿದ್ದು, 58.8 ಅಡಿಗಳಷ್ಟು ಎತ್ತರದ ಗೊಮ್ಮಟೇಶ್ವರ ವಿಗ್ರಹ ಜಗತ್‌ ಪ್ರಸಿದ್ದವಾಗಿದೆ