ಹೊಸಪೇಟೆ Railway Stationಗೆ ಹಂಪಿಯ ಸ್ಪರ್ಶ

Mar 22, 2022, 2:41 PM IST

ಐತಿಹಾಸಕ ಹಂಪಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ..  ಹಂಪಿಯ ಸ್ಮಾರಕದ ಸೌಂದರ್ಯ ವಿಜಯನಗರ(Vijaynagar)ದ ಇತಿಹಾಸ ಕೇಳಲು ಮತ್ತು ನೋಡಲು ಎಲ್ಲರಿಗೂ ಬಲು ಇಷ್ಟ. ಎಲ್ಲದರಲ್ಲೂ ಹಂಪಿಯ ಸ್ಮಾರಕವನ್ನು ಕಾಣುವ ಸ್ಮಾರಕ ಪ್ರಿಯರಿಗಾಗಿ ರೈಲ್ವೇ ಇಲಾಖೆ ಮತ್ತು ಪ್ರವಾಸೋದ್ಯಮ ‌ಇಲಾಖೆ ಜಂಟಿಯಾಗಿ ವಿನೂತನ ಪ್ರಯತ್ನ ಮಾಡಿದೆ.  ಹೌದು, ಇಡೀ‌‌ ಹೊಸಪೇಟೆ(Hospet)ಯ ರೈಲ್ವೆ ನಿಲ್ದಾಣ(Railway station)ವನ್ನು ಹಂಪಿಯ ಸ್ಮಾರಕ ಮಾದರಿಯಲ್ಲಿ ‌ನಿರ್ಮಾಣ ಮಾಡೋ ಮೂಲಕ ನಿಲ್ದಾಣದಲ್ಲಿಯೇ ಹಂಪಿಯ ಸ್ಮಾರಕ ಕಣ್ತಂಬಿಕೊಳ್ಳುವಂತೆ ಮಾಡಿದ್ದಾರೆ.

 ಹಂಪಿ(Hampi)ಯ ಐಕಾನ್ ಆಗಿರೋ ಕಲ್ಲಿನ ತೇರಿನ ಮಾದರಿಯನ್ನು ನಿಲ್ದಾಣದ ಮುಂಭಾಗದಲ್ಲಿ ‌ನಿರ್ಮಿಸಲಾಗಿದೆ. ದ್ವಾರಬಾಗಿಲಿನಲ್ಲಿ ಬೃಹತ್ ಚಕ್ರದ ಕಲ್ಲಿನ ತೇರಿನ ಮಾದಿರಿಯ ಸ್ಮಾರಕ ನೋಡುಗರನ್ನು ಆಕರ್ಷಿಸುತ್ತದೆ. ನಿಲ್ದಾಣದ ಒಳ ಗೋಡೆಯ ಮೇಲೂ ವಿಜಯನಗರದ ಇತಿಹಾಸ ಸಾರುವ ಚಿತ್ತಾರಗಳು,  ಹಂಪಿ ಸ್ಮಾರಕದ ಸ್ಥಬ್ದ ಚಿತ್ರಗಳು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿವೆ.. ಎಲ್ಲೆಲ್ಲೂ ಹಂಪಿ ಎನ್ನುವ ಧ್ಯೇಯ ವಾಕ್ಯವನ್ನು ‌ಪಾಲಿಸೋ ಮೂಲಕ ನಿಲ್ದಾಣದ ಯಾವ ಮೂಲೆಯಲ್ಲಿ ಹೋದ್ರೂ ಹಂಪಿಯ ಯಾವುದಾದರೊಂದು ಕುರುಹು ಕಾಣಬೇಕು ಆ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ.

ವಿಶ್ವವಿಖ್ಯಾತ ಹಂಪಿಯನ್ನು ನೋಡಲು ದೇಶವಿದೇಶದಿಂದ ನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ಅವರಿಗೆ ಹೊಸಪೇಟೆಗೆ ಬಂದ ಕೂಡಲೇ ಆ ಕಲ್ಪನೆ ಬರಬೇಕು ಎನ್ನುಬ ಉದ್ದೇಶದಿಂದ ತಲಾ ನಾಲ್ಕು ಕೋಟಿ ಅಂದ್ರೇ ಪ್ರವಾಸೋದ್ಯಮ ಮತ್ತು ರೈಲ್ವೆ ಇಲಾಖೆಯ  ಜಂಟಿ ಕಾರ್ಯಾಚರಣೆಯಲ್ಲಿ ಎಂಟು ಕೋಟಿ ವೆಚ್ಚದಲ್ಲಿ ನಿಲ್ದಾಣ ಅಭಿವೃದ್ಧಿ ಮಾಡಲಾಗಿದೆ.

Save Soil Campaign: ಲಂಡನ್‌ನಿಂದ ಕಾವೇರಿವರೆಗೆ 35,000 ಕಿ.ಮೀ ಸದ್ಗುರು ಬೈಕ್‌ ರ್ಯಾಲಿ

ಸಾಮಾನ್ಯವಾಗಿ ಯಾವುದಾದರೂ ಕಡೆ ಅಭಿವೃದ್ಧಿ ಮಾಡಬೇಕಂದ್ರೇ ರಾಜ್ಯ ಸರ್ಕಾರ ಇಚ್ಚಾಶಕ್ತಿ ಇದ್ರೇ ಸಾಕು ಅದ್ರೇ ರೈಲ್ವೆ ಇಲಾಖೆಯದ್ದು ಎಲ್ಲವೂ ಕೇಂದ್ರದಿಂದಲೇ ಅಗಬೇಕು. ಹೀಗಾಗಿ ಪ್ರವಾಸೋದ್ಯಮ ಇಲಾಖೆ ಸಚಿವ ಆನಂದ ಸಿಂಗ್ ಮತ್ತು ಸ್ಥಳೀಯ  ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ನಿರಂತರ ಪ್ರಯತ್ನದಿಂದ ಈ ಕನಸು ಸಾಕರಗೊಂಡಿದೆ ಎನ್ನುತ್ತಿದ್ದಾರೆ ಸ್ಥಳೀಯರು.

Happy Nation Finland ಜನರ ಸಂತೋಷದ ರಹಸ್ಯ ಇಲ್ಲಿದೆ!

 ಕಳೆದ ವರ್ಷ ರಾಜ್ಯದ  31ನೇ‌ ಜಿಲ್ಲೆಯಾಗಿ ಹೊರಹೊಮ್ಮಿದ ವಿಜಯನಗರ ಜಿಲ್ಲೆಯ ಅಭಿವೃದ್ಧಿಗೆ ಹೊಸ ರೀತಿಯ ಕನಸನ್ನು ಸಚಿವ ಆನಂದ ಸಿಂಗ್ ಕಂಡಿದ್ದರು. ಜಿಲ್ಲಾಡಳಿತದ ಕಚೇರಿ, ರೈಲ್ವೆ ‌ನಿಲ್ದಾಣ, ಎಸ್ಪಿ ಕಚೇರಿ ಸೇರಿದಂತೆ ಎಲ್ಲಕ್ಕೂ ಹಂಪಿಯ ಟಚ್ ಕೊಡಬೇಕು ಎನ್ನುವದಾಗಿತ್ತು.  ಹೊಸಪೇಟೆಯ ದ್ವಾರ ಬಾಗಿಲಿಗೆ ಬಂದ್ರೆ ಇದು ವಿಜಯನಗರ ಸಂಸ್ಥಾನವೆಂದು ಗೊತ್ತಾಗಬೇಕು ಎನ್ನುವ ಉದ್ದೇಶದಿಂದ ಈ ರೀತಿಯ ವಿನೂತನ ಪ್ರಯತ್ನ ಮಾಡ್ತಿದ್ದಾರೆ. ಇದೀಗ ಮೊದಲ ಪ್ರಯತ್ನ ಭರ್ಜರಿಯಾಗಿ ಯಶಸ್ವಿಯಾಗಿದೆ..