ದಟ್ಟ ಕಾನನದ ಹಸಿರು ಹಾದಿಯನ್ನು ಸೀಳಿ ಭೋರ್ಗರೆದು ಬೆಳ್ನೊರೆಯಾಗಿ ನೆಲವನ್ನು ಸ್ಪರ್ಶಿಸುವ ನೆತ್ತಿಯ ತೀರ್ಥಕೆರೆ ಫಾಲ್ಸ್... ಪ್ರವಾಸಿಗರಿಂದ ಫಾಲ್ಸ್ ಮುಂಭಾಗದಲ್ಲಿ ಸೆಲ್ಪಿ.. ಈ ದೃಶ್ಯ ಕಂಡಬಂದಿದ್ದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಜಯಪುರ ಗ್ರಾಮದ ತೀರ್ಥಕೆರೆ ಜಲಪಾತದಲ್ಲಿ.

ಇತ್ತೀಚಿನ ದಿನಗಳಲ್ಲಿ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಗೆ ಸಾಕಷ್ಷು ಮಂದಿ ಪ್ರವಾಸಿಗರು ಬಂದು ಹೋಗುತ್ತಾರೆ. ಪ್ರವಾಸಿಗರನ್ನು ಸೆಳೆಯುವಲ್ಲಿ ಇಲ್ಲಿನ ಜಲಪಾತಗಳು ಕೂಡ ಸಾಕಷ್ಷು ಪ್ರಸಿದ್ದಿ ಪಡೆದಿವೆ. ಇದರ ಸಾಲಿಗೆ ತೀರ್ಥಕೆರೆ ಜಲಪಾತವೂ ಸೇರಿಕೊಳ್ಳುತ್ತದೆ. ಒಮ್ಮೆ ಈ ಸ್ಥಳಕ್ಕೆ ಬಂದು ನೋಡಿದ್ರೆ ಎಷ್ಟೆ ದೂರದಿಂದ ಬಂದಿದ್ರು ಆಯಾಸವೆಲ್ಲಾ ಮಂಗಮಾಯ. ಯಾಂತ್ರಿಕ ಜೀವನದ ಜಂಜಾಟದಿಂದ ಹೊರತಂದು ನವಚೈತನ್ಯ ಒದಗಿಸೋ ಶಕ್ತಿ ಈ ಜಲಪಾತಕ್ಕಿದೆ. ಕಪ್ಪನೆಯ ಬಂಡೆಗಳ ಮಧ್ಯೆ ಕ್ಷೀರದ ರೀತಿಯಲ್ಲಿ ಧುಮ್ಮುಕ್ಕುವ ಮನಮೋಹಕ ಜಲಪಾತದ ದೃಶ್ಯ ಕಾವ್ಯವನ್ನ ವರ್ಣಿಸಲು ಪದಗಳೇ ಸಾಲದು. ಮಲೆನಾಡಿನಲ್ಲಿ ಮಳೆರಾಯನ ಅಬ್ಬರ ಜಾಸ್ತಿಯಾಗ್ತಿರೋದ್ರಿಂದ ಈ ಜಲಪಾತಕ್ಕೆ ಡಬಲ್ ಜೀವ ಬಂದಿದೆ.