ಚಂದ್ರನ ಗುರುತ್ವ ಬಲದ ವ್ಯಾಪ್ತಿಗೆ ಸೇರಿದ ಚಂದ್ರಯಾನ 2

Aug 20, 2019, 7:32 PM IST

ಬೆಂಗಳೂರು(ಆ.20): ಭೂಮಿಯ ನೈಸರ್ಗಿಕ ಉಪಗ್ರಹ ಚಂದಿರನ ಒಡಲಲ್ಲಿರುವ ಹಲವು ರಹಸ್ಯಗಳನ್ನು ಭೇದಿಸಲು ಹೊರಟಿರುವ ಚಂದ್ರಯಾನ-2 ನೌಕೆ ಇಂದು ಬೆಳಗ್ಗೆ ಮಹತ್ವದ ಮೈಲುಗಲ್ಲೊಂದನ್ನು ದಾಟಿದೆ.  ಭೂಮಿಯ ಗುರುತ್ವ ಬಲ ತೊರೆದು ಚಂದ್ರನತ್ತ ಮುಖ ಮಾಡಿರುವ ನೌಕೆಯನ್ನು ಇಸ್ರೋ ವಿಜ್ಞಾನಿಗಳು ಚಂದ್ರನ ಕಕ್ಷೆಗೆ ಸೇರಿಸಿದ್ದಾರೆ.  ಆ ಮೂಲಕ ಸವಾಲಿನ ಕೆಲಸವೊಂದನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ ..