Fake Sim Card Racket: ಕರ್ನಾಟದಲ್ಲಿ ಸದ್ದು ಮಾಡುತ್ತಿದೆ ನಕಲಿ ಸಿಮ್‌ ಕಾರ್ಡ್‌ ಮಾಫಿಯಾ!

Mar 19, 2022, 1:07 PM IST

ಬೆಂಗಳೂರು (ಮಾ. 19): ಕರ್ನಾಟಕದಲ್ಲಿ ಪ್ರತಿದಿನ ನಡೆಯುವ ಬೇಧಿಸಲಾಗದ ಕ್ರೈಂ ಪ್ರಕರಣಗಳ ಹಿಂದೆ ಯಾರಿದ್ದಾರೆ? ಅಪರಾಧ ಪ್ರಕರಣಗಳು ಪದೇ ಪದೇ ಹೆಚ್ಚಾಗಲು ಕಾರಣವೇನು? ಯಾವ ಕಾರಣಕ್ಕಾಗಿ ಅವು ಪತ್ತೆಯಾಗದೆ ಹಾಗೇ ಉಳಿಯುತ್ತವೆ? ಈ ಎಲ್ಲ ಅಪರಾಧಗಳ ಹಿಂದಿನ ರಹಸ್ಯವೇನು ಗೊತ್ತಾ? ಮೊದಲೆಲ್ಲ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಯಾವುದೇ ತಂತ್ರಜ್ಞಾನದ ಸಹಾಯ ಇರಲಿಲ್ಲ. ಆದರೆ ಈಗ ಹಾಗಲ್ಲ, ಯಾವುದೇ ಪ್ರಕರಣವನ್ನು ಪತ್ತೆ ಹಚ್ಚಲು ಪೊಲೀಸರು‌ ಮೊದಲು ಮೊಬೈಲ್‌ ಮಾಹಿತಿ ಮೊರೆ ಹೋಗುತ್ತಾರೆ.

ಇದನ್ನೂ ಓದಿ: Bengaluru Crime: ನಕಲಿ ದಾಖಲೆ ಬಳಸಿ ಎನ್‌ಆರ್‌ಐಗಳ ಸೈಟ್‌ ಮಾರಾಟ..!

ಯಾವುದೇ ಕ್ರೈಂ ಪ್ರಕರಣಗಳಲ್ಲಿ ಮೊಬೈಲ್‌ ಸುಳಿವಿನ ಮೂಲಕ ಪೊಲೀಸರು ಪ್ರಕರಣಗಳನ್ನು ಬೇಧಿಸುತ್ತಾರೆ. ಟವರ್‌ ಲೋಕೇಶನ್‌ ಬಳಸಿಕೊಂಡು ಸಿಮ್‌ ಕಾರ್ಡ್‌ ಮೂಲಕವೇ ಪೊಲೀಸರು ಅರೋಪಿಗಳನ್ನು ಪತ್ತೆ ಹಚ್ಚುತ್ತಾರೆ. ಹೀಗಾಗಿ ಪೊಲೀಸರು ಟವರ್‌ ಲೋಕೇಶನ್‌ ಮತ್ತು ಸಿಮ್‌ ಕಾರ್ಡ್‌ಗಳ ಮೇಲೆ ಅವಲಾಂಬಿತರಾಗಿದ್ದಾರೆ. 

ಆದರೆ ಅದೇ ಸಿಮ್‌ ಕಾರ್ಡ್‌ ನಕಲಿಯಾದ್ರೆ, ಸಿಮ್‌ ಕಾರ್ಡ್‌ ಸಿಕ್ಕಸಿಕ್ಕವರ ಹೆಸರಿನಲ್ಲಿದ್ರೆ ಯಾವ ಕೇಸು ಪತ್ತೆಯಾಗೋದು ಡೌಟು. ರಾಜ್ಯದಲ್ಲಿ ನಡೆಯುತ್ತಿರುವ ಬಹುತೇಕ ಪ್ರಕರಣಗಳಲ್ಲಿ ನಕಲಿ ಸಿಮ್‌ ಕಾರ್ಡ್‌ಗಳ ಪಾತ್ರ ಹೆಚ್ಚಿದೆ. ಅಂಥಹದೊಂದದ್ದು ಡೊಡ್ಡ ಜಾಲವನ್ನು ಏಷ್ಯಾನೆಟ್‌ ಸುವರ್ಣ್‌ ನ್ಯೂಸ್‌ ತಂಡ ಬಯಲು ಮಾಡಿದೆ. ಈ ಕುರಿತ ಕಂಪ್ಲೀಟ್‌ ವರದಿ ಇಲ್ಲಿದೆ.