ಕೊನೆಗೂ ಚಂದ್ರನ ಮೇಲೆ ಇಳಿದ ವಿಕ್ರಮ! ಮೂಡಿತು ಭರವಸೆಯ ಕಿರಣ

Sep 9, 2019, 8:04 PM IST

ಬೆಂಗಳೂರು (ಸೆ.09): ಭಾರತದ ಮಹಾತ್ವಾಕಾಂಕ್ಷೆ ಯೋಜನೆಯಾಗಿರುವ ಚಂದ್ರಯಾನ-2 ಅನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ISRO ವಿಜ್ಞಾನಿಗಳು ಆಹೋರಾತ್ರಿ ಪ್ರಯತ್ನಪಡುತ್ತಿದ್ದಾರೆ. ಕಳೆದ ಸೆ.7ರಂದು ಸಂಪರ್ಕ ಕಡಿದುಕೊಂಡಿರುವ ವಿಕ್ರಮ್ ಲ್ಯಾಂಡರ್ ಈಗ ಚಂದ್ರನ ಮೇಲೆ ಲ್ಯಾಂಡ್ ಆಗಿದೆ. ವಿಕ್ರಮ್ ಲ್ಯಾಂಡರ್ ವಾಲಿದ ಸ್ಥಿತಿಯಲ್ಲಿದೆ ಎಂದು ತಿಳಿದುಬಂದಿದೆ. ಆದರೆ ಸಂಪರ್ಕ ಇನ್ನೂ ಸಾಧ್ಯವಾಗಿಲ್ಲ. ನಾವಿನ್ನೂ ಭರವಸೆ ಕಳೆದುಕೊಂಡಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.