ನಿಷೇಧದ ಬಳಿಕ ಪೋರ್ನ್ ವೀಕ್ಷಣೆಗೆ ಕಳ್ಳದಾರಿ, 'ನೀಲಿ' ಪ್ರಿಯರಿಗೆ ಇದೇ ಹೆದ್ದಾರಿ!

Dec 3, 2019, 7:26 PM IST

ಭಾರತದಲ್ಲಿ ಕಳೆದ ವರ್ಷ ಅಕ್ಷೋಬರ್‌ನಲ್ಲಿ  ನೂರಾರು ಪೋರ್ನ್ ವೆಬ್‌ಸೈಟ್‌ಗಳನ್ನು ಬ್ಯಾನ್ ಮಾಡಿದ ಬಳಿಕ, ಮೊಬೈಲ್‌ಗಳಲ್ಲಿ ವರ್ಚುವಲ್ ಪ್ರೈವೇಟ್ ನೆಟ್ವರ್ಕ್ (VPN)ಆ್ಯಪ್‌ಗಳ ಡೌನ್‌ಲೋಡ್ ಪ್ರಮಾಣ 405 ಶೇಕಡಾ ಹೆಚ್ಚಾಗಿದೆ. ಆ್ಯಪಲ್ ಆ್ಯಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್‌ ಮಾಹಿತಿ ಪ್ರಕಾರ ಕಳೆದ 12 ತಿಂಗಳಿನಲ್ಲಿ  VPN ಆ್ಯಪ್‌ಗಳ  ಡೌನ್‌ಲೋಡ್ ಸಂಖ್ಯೆ 57 ಮಿಲಿಯನ್‌ಗೆ ಮುಟ್ಟಿದೆ.

VPN ತಂತ್ರಜ್ಞಾನ ಮೂಲಕ ಬಳಕೆದಾರರು ತಮ್ಮ ಲೊಕೇಶನ್‌ನ್ನು ಗೌಪ್ಯವಾಗಿಡಬಹುದಲ್ಲದೇ,  ಹೆಚ್ಚು ಸುರಕ್ಷಿತವಾಗಿ ಇಂಟರ್ನೆಟ್ ಬಳಸಬಹುದು.  ಪಬ್ಲಿಕ್ ಇಂಟರ್ನೆಟ್ ಸಂಪರ್ಕ ಬಳಸಿ ಖಾಸಗಿ ನೆಟ್ವರ್ಕ್ ಸೃಷ್ಟಿಸಲು VPN ತಂತ್ರಜ್ಞಾನವನ್ನು ಬಳಸಲಾಗುತ್ತದೆ.  ಆ ಮೂಲಕ ಬಳಕೆದಾರರಿಗೆ ಆನ್‌ಲೈನ್ ಪ್ರೈವೆಸಿಯಷ್ಟೇ ಅಲ್ಲ,  ಗೌಪ್ಯತೆ ಕೂಡಾ ಸಿಗುತ್ತದೆ. ಇಲ್ಲಿದೆ ಹೆಚ್ಚಿನ ಮಾಹಿತಿ...