Central Jail Expose: ವರದಿ ತರಿಸಿಕೊಂಡು ಡಿಜಿ ಜೊತೆ ಚರ್ಚೆ, ಕಠಿಣ ಕ್ರಮ: ಬೊಮ್ಮಾಯಿ

Jan 25, 2022, 3:35 PM IST

ಬೆಂಗಳೂರು (ಜ. 25): ಸೆಂಟ್ರಲ್ ಜೈಲಿನಲ್ಲಿ (Central Jail) ನಡೆಯುವ ಕರ್ಮಕಾಂಡದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಬೆನ್ನಲ್ಲೇ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ. ಪರಪ್ಪನ ಅಗ್ರಹಾರಕ್ಕೆ ಅಧಿಕಾರಿಗಳ ದೌಡಾಯಿಸಿದ್ದಾರೆ. ಕೈದಿಗಳಿಗೆ ಗಾಂಜಾ, ಮೊಬೈಲ್ ಸಿಗದಂತೆ ಎಚ್ಚರಿಕೆ ವಹಿಸಿದ್ದಾರೆ. ಅಗತ್ಯ ಬಿದ್ರೆ ಕಾನೂನು ಬದಲಾವಣೆ ಮಾಡುತ್ತೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ' ಎಂದು ಅಧಿಕಾರಿಗಳು ಹೇಳಿದ್ದಾರೆ. 

Exclusive: ಇದು ಜೈಲಲ್ಲ ಲಾಡ್ಜ್, ಅಧೀಕ್ಷಕ ರಂಗನಾಥ್ ಸಾಥ್‌ನಿಂದ ಕೈದಿಗಳು ಬಿಂದಾಸ್.!

'ಸೆಂಟ್ರಲ್ ಜೈಲಿನಲ್ಲಿ ನಡೆಯುವ ಅಕ್ರಮ ಚಟುವಟಿಕೆ ಬಗ್ಗೆ ವರದಿಯನ್ನು ನೋಡಿದ್ದೇನೆ. ಅಲ್ಲಿ ಏನು ನಡೆದಿದೆ ಎಂದು ವರದಿ ತರಿಸಿಕೊಳ್ಳುತ್ತೇನೆ. ಡಿಜಿ ಜೊತೆ ಮಾತನಾಡಿ ಕಠಿಣ ಕ್ರಮಕ್ಕೆ ಆದೇಶಿಸುತ್ತೇನೆ' ಎಂದು ಸಿಎಂ ಬೊಮ್ಮಾಯಿ (CM Bommai) ಹೇಳಿದ್ದಾರೆ. 

ಜೈಲಿನಲ್ಲಿ ಕೈದಿಗಳು ಗಾಂಜಾ, ಸಿಗರೇಟು ಸೇದಿಕೊಂಡು, ಮೊಬೈಲ್ ಬಳಸಿಕೊಂಡು ಆರಾಮಾಗಿ ಇದ್ರು. ಜೈಲು ಅಧೀಕ್ಷಕ ರಂಗನಾಥ್ ಇರುವವರೆಗೆ ನಾವು ಬಿಂದಾಸ್ ಆಗಿ ಇರಬಹುದು, ಬೇಕಾಗಿದ್ದೆಲ್ಲಾ ಸಲೀಸಾಗಿ ಸಿಗುತ್ತೆ ಎಂದು ಗಾಂಜಾ ಸೇದುತ್ತಾ, ಕೈದಿಯಬ್ಬ ಮಾತನಾಡಿರುವ ಎಕ್ಸ್‌ಕ್ಲೂಸಿವ್ ವಿಡಿಯೋ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.