
ವಿಜಯಪುರ ಜಿಲ್ಲೆಯ ದೇವರ ಜಾತ್ರೆಯಲ್ಲಿ ಪೂಜಾರಿಯೊಬ್ಬರು ಮಗುವನ್ನು ಎತ್ತರದಿಂದ ಎಸೆಯುವ ನಿಷೇಧಿತ ಆಚರಣೆ ನಡೆಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ ಯಂಭತ್ತಾಳದ ಗೌರಿಶಂಕರ ದೇವಾಲಯದಲ್ಲಿ ನಡೆದಿದ್ದು, ಮಗುವಿನ ಜೀವಕ್ಕೆ ಅಪಾಯವೊಡ್ಡುವ ಈ ಆಚರಣೆಯನ್ನು ನಿಷೇಧಿಸಬೇಕೆಂದು ಜನರು ಆಗ್ರಹಿಸಿದ್ದಾರೆ.
ವಿಜಯಪುರ ಜಿಲ್ಲೆಯ ದೇವರ ಜಾತ್ರೆಯಲ್ಲಿ ಪೂಜಾರಿಯೊಬ್ಬರು ನಿಷೇಧಿತ ಆಚರಣೆಯನ್ನು ಮಾಡಿದ್ದಾರೆ. ಪೂಜಾರಿ ದೇವಸ್ಥಾನದ ಜಗುಲಿಯ ಮೇಲೆ ದೇವರ ಮೂರ್ತಿಯ ಪಕ್ಕದಲ್ಲಿ ಮಗುವನ್ನು ನೀವಾಳಿಸಿ, ಮೇಲಕ್ಕೆ ಎತ್ತಿ ಮಗುವನ್ನು ಕೆಳಗೆ ಬಿಡುತ್ತಾರೆ. ಆಗ ಪೋಷಕರು ಕೆಳಗೆ ಜೋಳಿಗೆ ಹಿಡಿದು ಮಗು ಬೀಳುವಂತೆ ಕಾಯುತ್ತಿರುತ್ತಾರೆ. ಮಗುವನ್ನು ಜೋಳಿಗೆಯಲ್ಲಿ ಹಿಡಿದುಕೊಳ್ಳಬೇಕು. ಒಂದು ವೇಳೆ ಮಗು ಜೋಳಿಗೆಯಲ್ಲಿ ಬೀಳದೆ ತಪ್ಪಿದರೆ ಮಗುವಿನ ಜೀವಕ್ಕೆ ಅಪಾಯವಾಗುತ್ತದೆ. ಇನ್ನು ಮಗುವನ್ನು ಮೇಲಿನಿಂದ ಕೆಳಗೆ ಎಸೆಯುವಾಗ ಮಗುವಿಗೆ ಉಸಿರಾಟ ಸಮಸ್ಯೆ ಎದುರಾಗಿ ಪ್ರಾಣಕ್ಕೂ ಅಪಾಯ ಬರಬಹುದು. ಆದ್ದರಿಂದ ರಾಜ್ಯದಲ್ಲಿ ಇದನ್ನು ನಿಷೇಧ ಮಾಡಿದ್ದರೂ, ಆಚರಣೆ ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಈ ಘಟನೆ ವಿಜಯಪುರ ಯಂಭತ್ತಾಳದ ಗೌರಿಶಂಕರ ದೇವಾಲಯದಲ್ಲಿ ಈ ಮೌಢ್ಯಾಚರಣೆ ಮಾಡಲಾಗಿದರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಂಥಹ ಮೌಢ್ಯ ಆಚರಣೆಗಳನ್ನು ಸರ್ಕಾರದಿಂದ ಕಷ್ಟುನಿಟ್ಟಾಗಿ ನಿಷೇಧಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಮೇಲಿಂದ ಪುಟ್ಟ ಮಕ್ಕಳನ್ನು ಪೂಜಾರಿ ಎಸೆಯುವುದನ್ನು ತಪ್ಪಿಸಿ, ಏನೂ ಅರಿಯದ ಮಕ್ಕಳು ಪಾಯಕ್ಕೆ ಸಿಲುಕುವುದನ್ನು ತಪ್ಪಿಸಬೇಕು ಎಂದು ಆಗ್ರಹ ಮಾಡಿದ್ದಾರೆ.