ಉತ್ತರ ಕನ್ನಡದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಶನಿವಾರ ಸಡನ್ ಆಗಿ ಸುದ್ದಿಯಾದರು. ಸಕ್ರಿಯ ರಾಜಕಾರಣದಿಂದ ಕಳೆದ ನಾಲ್ಕು ವರ್ಷ ದೂರವೇ ಉಳಿದುಕೊಂಡಿದ್ದ ಅವರು ವಿವಾದಿತ ಮಾತಿನ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ಬೆಂಗಳೂರು (ಜ.13): ಗಾಂಧಿ ಕುಟುಂಬಕ್ಕೆ ಗೋಪಾಷ್ಟಮಿಯ ಶಾಪ, ಬಾಬ್ರಿ ಮಸೀದಿ ರೀತಿಯಲ್ಲೇ ಇತರ ಮಸೀದಿಗಳನ್ನು ಒಡೆದು ಹಾಕುವ ಬೆದರಿಕೆ.. ಕೊನೆಗೆ ಸಿಎಂ ಸಿದ್ಧರಾಮಯ್ಯ ಅವರಿಗೆ ಏಕವಚನದಲ್ಲಿ ವಾಗ್ದಾಳಿ..
ನಾಲ್ಕು ವರ್ಷದ ಬಳಿಕ ಸಕ್ರಿಯ ರಾಜಕಾರಣದ ವಿಚಾರವಾಗಿ ಮಾತನಾಡಿರುವ ಉತ್ತರ ಕನ್ನಡದ ಬಿಜೆಪಿ ಸಂಸದ ಮತ್ತೊಮ್ಮೆ ವಿವಾದಿತ ಮಾತಿನ ಮೂಲಕ ಸುದ್ದಿಯಾಗಿದ್ದಾರೆ. ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಬಾಬ್ರಿ ಮಸೀದಿಯಂತೆ ಇತರ ಮಸೀದಿಗಳೂ ಧ್ವಂಸವಾಗಲಿದೆ ಎಂದಿದ್ದಾರೆ.
ಭಟ್ಕಳ, ಶಿರಸಿ, ಶ್ರೀರಂಗಪಟ್ಟಣದ ಮಸೀದಿಗಳೆಲ್ಲವೂ ಹಿಂದೂ ದೇವಾಲಯಗಳು: ಅನಂತ್ ಕುಮಾರ್ ಹೆಗಡೆ
ನೀನು ಬಾರದಿದ್ದರೆ ರಾಮಜನ್ಮಭೂಮಿ ನಿಲ್ಲಲ್ಲ ಮಗನೇ ಎಂದು ಸಿದ್ಧರಾಮಯ್ಯ ಅವರಿಗೆ ಏಕವಚನದಲ್ಲಿಯೆ ವಾಗ್ದಾಳಿ ನಡೆಸಿದ್ದು, ಸಿಎಂ ಹಿಂದು ಸಮಾಜ ಒಡೆಯುವ ಮೂರ್ಖರಾಮಯ್ಯ ಎಂದು ಟೀಕೆ ಮಾಡಿದ್ದಾರೆ.