Nov 21, 2021, 10:29 AM IST
ಬೆಂಗಳೂರು (ನ. 21): ರಾಜ್ಯದಲ್ಲಿ ಹಿಂಗಾರು ಅಬ್ಬರದಿಂದ ಅಕಾಲಿಕ ಮಳೆ ( Untimely Rain) ಮುಂದುವರೆದಿದೆ. ಕಟಾವಾಗಿ ಮನೆ ಸೇರಬೇಕಿದ್ದ ಫಸಲು (Crop) ಸಂಪೂರ್ಣ ನಾಶವಾಗಿದೆ. ರಾಜ್ಯಾದ್ಯಂತ 92 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ. 1400 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.
News Hour: ಎಲ್ಲಾ ಕಡೆ ಅಕಾಲಿಕ ಮಳೆ ಅಬ್ಬರ, ಕೃಷಿ ಮಸೂದೆ ಹಿಂದಕ್ಕೆ ಪಡೆಯಲು ಅಸಲಿ ಕಾರಣ
30 ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ. 59 ಕುಟುಂಬಗಳ 413 ಕ್ಕೂ ಹೆಚ್ಚು ಮಂದಿ ಪರಿಹಾರ ಕೇಂದ್ರಕ್ಕೆ ಶಿಫ್ಟ್ ಅಗಿದ್ದಾರೆ. ಹಾವೇರಿಯಲ್ಲಿ 6 ಸಾವಿರಕ್ಕೂ ಹೆಚ್ಚು ಕೋಳಿಗಳು ಜಲಸಮಾಧಿಯಾಗಿವೆ. ಚಿತ್ರದುರ್ಗದಲ್ಲಿ 60 ಎಕರೆಯಲ್ಲಿ ಬೆಳೆದಿದ್ದ ಕಡಲೆ ಬೆಳೆ ನಾಶವಾಗಿದೆ. ನದಿ, ಕೆರೆಗಳು ತುಂಬಿ ಜಮೀನಿಗೆ ನೀರು ನುಗ್ಗಿದೆ.