- ಚಿನ್ನದ ಕೆಲಸಗಾರ ರಾಮದಾಸ್ ಶೇಟ್ ದೇಹದಲ್ಲಿ ಕಾಂತೀಯ ಶಕ್ತಿ!
- ದೇಹಕ್ಕೆ ನಾಣ್ಯ, ಚಮಚ ಇತ್ಯಾದಿ ಲೋಹದ ವಸ್ತುಗಳು ಅಂಟಿಕೊಳ್ಳುವ ವಿಡಿಯೋ
- ಲಸಿಕೆ ಪಡೆದರೆ ಆಯಸ್ಕಾಂತ ಶಕ್ತಿ ಉತ್ಪನ್ನವಾಗುವುದು ಸುಳ್ಳು: ಜಿಲ್ಲಾಧಿಕಾರಿ
-
ಉಡುಪಿ (ಜೂ. 16): ನಾಸಿಕ್‌ನ ವ್ಯಕ್ತಿಯೊಬ್ಬರು ತಾನು ಕೊರೋನಾ ಲಸಿಕೆ ತೆಗೆದುಕೊಂಡ ಮೇಲೆ ತನ್ನ ದೇಹಕ್ಕೆ ಕಬ್ಬಿಣದ ವಸ್ತುಗಳು ಅಂಟಿಕೊಳ್ಳುತ್ತಿವೆ ಎಂಬ ವಿಡಿಯೋವನ್ನು ನೋಡಿದ ರಾಮದಾಸ್ ಶೇಟ್ ಎಂಬುವವರು ಇತ್ತೀಚೆಗೆ ಲಸಿಕೆ ತೆಗೆದುಕೊಂಡಿದ್ದು, ಪರೀಕ್ಷೆಗೆಂದು ತನ್ನ ದೇಹಕ್ಕೆ ನಾಣ್ಯಗಳನ್ನು ಅಂಟಿಸಿದಾಗ ಅವು ಕಳಚಿಕೊಳ್ಳದೇ ಗಟ್ಟಿಯಾಗಿ ಹಿಡಿದುಕೊಂಡವು. ಇದನ್ನು ಅವರು ಮಾಧ್ಯಮಗಳ ಗಮನಕ್ಕೆ ತಂದಿದ್ದಾರೆ.
ಈ ವಿಡಿಯೋ ವೈರಲ್ ಆಗುತಿದ್ದಂತೆ ಶೇಟ್ ಅವರನ್ನು ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಗಿದೆ. ಆದರೆ ಅವರ ದೇಹದಲ್ಲಿ ಈ ಆಯಸ್ಕಾಂತಿಯ ಶಕ್ತಿ ಹೇಗೆ ಬಂತು ಎಂಬುದು ಪತ್ತೆಯಾಗಿಲ್ಲ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ. ಹಾಗಾದರೆ ಲೋಹದ ವಸ್ತುಗಳು ಅಂಟಿಕೊಳ್ಳುತ್ತಿರೋದ್ಯಾಕೆ...? ಇಲ್ಲಿದೆ ವಿವರ