ಶಿವಾಜಿ ಕಾಲದ ಸುರಂಗ ಮಾರ್ಗ ಪತ್ತೆ, ಯಾವ ಎಂಜಿನೀಯರ್‌ಗೂ ಕಮ್ಮಿಯಿಲ್ಲ ಮಹಾರಾಜರ ಪರಿಕಲ್ಪನೆ!

Apr 7, 2021, 4:05 PM IST

ಬೆಳಗಾವಿ (ಏ. 07):  ಹುಕ್ಕೇರಿ ತಾಲೂಕಿ‌ನ‌ ಹರಗಾಪುರ ಗಡಾ ಗ್ರಾಮದಲ್ಲಿ ಹಳೆಯ ಸುರಂಗ ಮಾರ್ಗ ಪತ್ತೆಯಾಗಿದೆ.  ಹರಗಾಪುರ ಗ್ರಾಮದಲ್ಲಿ ರಸ್ತೆ ಕಾಮಗಾರಿ ಮಾಡುವ ಸಂದರ್ಭದಲ್ಲಿ ಈ ಟನಲ್ ಪತ್ತೆಯಾಗಿದ್ದು, ಸದ್ಯ ಎಲ್ಲರ ಕುತೂಹಲ ಹೆಚ್ಚುವಂತೆ ಮಾಡಿದೆ. ಈ ಟನಲ್ ಪರಿಕಲ್ಪನೆ ನಮ್ಮ ರಾಜ ಮಹಾರಾಜರಿಗೆ ಮೊದಲೇ ಇತ್ತು ಎಂಬುವುದಕ್ಕೆ ಸಾಕ್ಷಿ ಮತ್ತೊಂದು ಪುರಾವೆ ಸಿಕ್ಕಿದೆ. 

ಹಳೇ ವಿದ್ಯಾರ್ಥಿಗಳಿಂದ ಶಾಲೆಗೆ ಹೊಸ ರಂಗು, ಮಾದರಿಯಾಯ್ತು ಯುವಕರ ಈ ಕೆಲಸ!

ಈಗ ಪತ್ತೆಯಾಗಿರುವ ಈ ಟನಲ್ ಹರಗಾಪುರ ಗ್ರಾಮದಿಂದ 8 ಕೀಮಿ ದೂರವಿರುವ ಸಂಕೇಶ್ವರ ಪಟ್ಟಣದ ಶಂಕರಲಿಂಗ ದೇವಸ್ಥಾನ ಹಾಗೂ ಮಹಾರಾಷ್ಟ್ರದ ಸಮಾನ್ಯಘಢ ಎಂಬ ಪ್ರದೇಶಕ್ಕೆ ಸಂಪರ್ಕ ಬೆಳೆಸುತ್ತೆ ಎನ್ನುತ್ತಿದ್ದಾರೆ ಇತಿಹಾಸ ತಜ್ಞರು. ಅಪರೂಪದ ಈ ಟನಲನ್ನು ಸಂರಕ್ಷಿಸಬೇಕು ಎನ್ನುವುದು ಇತಿಹಾಸ ತಜ್ಞರು ಹಾಗೂ ಸ್ಥಳೀಯರ ಒತ್ತಾಯ.