ತುಮಕೂರಿನ (Tumakur) ವರದರಾಜ ನರ್ಸಿಂಗ್ ಕಾಲೇಜಿನಲ್ಲಿ ಕೊರೋನಾ (Covid19) ಸ್ಫೋಟಗೊಂಡಿದೆ. ಐವರು ಕೇರಳ (Kerala) ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ.
ತುಮಕೂರು (ಡಿ. 03): ಇಲ್ಲಿನ ವರದರಾಜ ನರ್ಸಿಂಗ್ ಕಾಲೇಜಿನಲ್ಲಿ (Nursing College) ಕೊರೋನಾ ಸ್ಫೋಟಗೊಂಡಿದೆ. ಐವರು ಕೇರಳ (Kerala) ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ.
ಇದೇ ಕಾಲೇಜಿನ 7 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಐವರಿಗೆ ಇದೀಗ ಪಾಸಿಟೀವ್ ಬಂದಿದೆ. ತುಮಕೂರು ಜಿಲ್ಲೆಯಲ್ಲಿ 20 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ. ಮುಂಜಾಗ್ರತಾ ಕ್ರಮ ವಹಿಸುವುದು ಅಗತ್ಯವಾಗಿದೆ.