
ಒಬ್ಬ ನಾಲಿಗೆ ಇದೆ ಅಂತ್ಹೇಳಿ ಬಾಯಿಗೆ ಬಂದ್ಹಾಗೆ ಮಾತನಾಡ್ತಿದ್ದ.. ಇನ್ನೊಬ್ಬ ಸಾಕ್ಷಿ, ದಾಖಲೆ ಏನು ಇಲ್ಲದೆಯೂ ಕಟ್ಟು ಕಥೆಗಳನ್ನೇ ಸತ್ಯದ ತಲೆ ಮೇಲೆ ಹೊಡೆದ ಹಾಗೆ ಹೇಳ್ತಿದ್ದ. ಆದ್ರೆ ಇಬ್ಬರ ಗ್ರಹಚಾರ ಹೇಗಿತ್ತು ಅಂದ್ರೆ.
ಬುಡಕ್ಕೆ ಬಂತಾ ಬರುಡೆ ಕೇಸ್..? ತಿಮರೋಡಿ ಅರೆಸ್ಟ್..! ಇವರು.. ಅವರು.. ಯಾರನ್ನೂ ಬಿಟ್ಟಿಲ್ಲ ಹೊಲಸು ನಾಲಿಗೆ..! ಖಾಕಿ ಕಾಣ್ತಿದ್ದಂತೆ ಶುರುವಾಗಿತ್ತು ಹೈಡ್ರಾಮ..! AI ವೀರ.. ಸುಳ್ಳು ಸಮೀರನಿಗೂ ಶುರು ಸಂಕಷ್ಟ..! ಇದುವೇ ಇವತ್ತಿನ ಸುವರ್ಣ ಸ್ಪೆಷಲ್ ಶಿವತಾಂಡವ.. ಕರ್ಮಫಲ. ಒಬ್ಬ ನಾಲಿಗೆ ಇದೆ ಅಂತ್ಹೇಳಿ ಬಾಯಿಗೆ ಬಂದ್ಹಾಗೆ ಮಾತನಾಡ್ತಿದ್ದ.. ಇನ್ನೊಬ್ಬ ಸಾಕ್ಷಿ, ದಾಖಲೆ ಏನು ಇಲ್ಲದೆಯೂ ಕಟ್ಟು ಕಥೆಗಳನ್ನೇ ಸತ್ಯದ ತಲೆ ಮೇಲೆ ಹೊಡೆದ ಹಾಗೆ ಹೇಳ್ತಿದ್ದ. ಆದ್ರೆ ಇಬ್ಬರ ಗ್ರಹಚಾರ ಹೇಗಿತ್ತು ಅಂದ್ರೆ, ಇಬ್ಬರನ್ನೂ ಒಂದೇ ದಿನ ಹುಡುಕಿ ಬಂದಿತ್ತು ಖಾಕಿ.
ಅದ್ರಲ್ಲಿ ಒಬ್ಬ ಅರೆಸ್ಟ್ ಆದ್ರೆ, ಇನ್ನೊಬ್ಬ ನಿರೀಕ್ಷಣಾ ಜಾಮೀನು ತಗೊಂಡು ಜಸ್ಟ್ ಬಚಾವ್ ಆದ. ಹಾಗಿದ್ರೆ ಈ ಇಬ್ಬರಿಗೂ ಈಗ ಖಾಕಿ ಕೇಡುಗಾಲ ಶುರುವಾಗಿದ್ದು ಯಾಕೆ.? ಅರೆಸ್ಟ್ ಆಗಿದ್ದಾನಲ್ಲಾ ಅವನ ಕೇಸ್ನಿಂದಲೇ ಶುರುಮಾಡೋಣ ಬನ್ನಿ. ಮಹೇಶ್ ಶೆಟ್ಟಿ ತಿಮರೋಡಿಯೇ ಒಂದು ಕೊಲೆ ಮಾಡಿ, ಆ ಶವವನ್ನ ಹೂತು ಹಾಕಿದ್ದಾರಾ..? ಸದ್ಯ ಇಂಥದ್ದೊಂದು ಆರೋಪ ಅವರ ಮೇಲೆ ಕೇಳಿ ಬರ್ತಿದೆ. ಹಾಗಿದ್ರೆ, ಈ ಆರೋಪ ಮಾಡ್ತಿರೋದು ಯಾರು..? ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕೊಲೆ ಹಾಗೇನೆ, ಕೊಲೆಯಾದ ಆ ಶವವನ್ನು ಹೂತು ಹಾಕಿರೋ ಆರೋಪ ಕೇಳಿ ಬರ್ತಿದೆ.
ಆ ಆರೋಪವೀಗ ಎಸ್ಐಟಿ ಅಂಗಳವನ್ನೂ ತಲುಪಿದೆ. ಇನ್ನು ತಿಮರೋಡಿ ಅರೆಸ್ಟ್ ಆದ ದಿನವೇ ಎಐ ವೀರ ಸಮೀರನಿಗೂ ಖಾಕಿ ಬಲೆ ಬೀಸಿತ್ತು. ಆದ್ರಾತ ನಿರೀಕ್ಷಣಾ ಜಾಮೀನು ಪಡೆದುಕೊಂಡು ಬಚಾವ್ ಆಗಿದ್ದಾನೆ. ಇಷ್ಟೆಲ್ಲದರ ಮಧ್ಯೆ ಮುಸುಕುಧಾರಿ ವ್ಯಕ್ತಿಯ ಮೊಲದ ಪತ್ನಿ, ಒಂದಿಷ್ಟು ಸ್ಫೋಟಕ ಹೇಳಿಕೆಯನ್ನ ಕೊಟ್ಟಿದ್ದಾರೆ. ಹಾಗಿದ್ರೆ, ಅನಾಮಿಕ ವ್ಯಕ್ತಿಯ ಬಗ್ಗೆ ಅವರು ಹೇಳಿದ್ದೇನು. ಮುಸುಕುಧಾರಿ ವ್ಯಕ್ತಿಯ ನಿಜ ಬಣ್ಣ ಬಯಲಾಗ್ತಿದೆ. ಮೊದಲು ಅನಾಮಿಕನ ಸ್ನೇಹಿತ ಆತನ ಬಗ್ಗೆ ಸ್ಪೋಟಕ ಸಂಗತಿಗಳನ್ನ ಹೊರಹಾಕಿದ್ದ.. ಇದೀಗ ಮುಸುಕುಧಾರಿ ವ್ಯಕ್ತಿಯ ಮೊದಲ ಪತ್ನಿಯೇ, ಅನಾಮಿಕನ ಬಗ್ಗೆ ಮತ್ತಷ್ಟು ವಿಚಾರಗಳನ್ನ ಹೊರಹಾಕಿದ್ದಾರೆ.